ADVERTISEMENT

ಬೆಂಗಳೂರು: ಉದ್ಯಾನದ ಗೇಟ್ ಬಿದ್ದು ಭದ್ರತಾ ಸಿಬ್ಬಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 16:02 IST
Last Updated 15 ಡಿಸೆಂಬರ್ 2024, 16:02 IST
<div class="paragraphs"><p>ಭದ್ರತಾ ಸಿಬ್ಬಂದಿ</p></div>

ಭದ್ರತಾ ಸಿಬ್ಬಂದಿ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಚಿಕ್ಕಪೇಟೆ ವಾರ್ಡ್‌ನ ತುಳಸಿತೋಪು ಉದ್ಯಾನದ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿಯ ತಲೆಗೆ ತೀವ್ರ ಪೆಟ್ಟಾಗಿದೆ.

ADVERTISEMENT

ಶ್ರೀರಾಮ್‌ಪುರದಲ್ಲಿ ನೆಲಸಿರುವ ತಮಿಳುನಾಡಿನ ಪ್ರಭಾಕರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಈ ಉದ್ಯಾನದಲ್ಲಿ ಕಸ ತುಂಬಿಕೊಂಡು ಹೋಗುವುದಕ್ಕೆ ಟಿಪ್ಪರ್ ಆಟೊ ಬಂದಿತು. ಆಟೊ ಒಳಗೆ ಹೋಗಲೆಂದು ಗೇಟ್‌ ಬೀಗ ತೆರೆಯಲಾಯಿತು. ಆಗ ಗೇಟ್ ಏಕಾಏಕಿ ಪ್ರಭಾಕರ್ ಮೇಲೆ ಬಿದ್ದಿದೆ. ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಐದು ತಿಂಗಳ ಹಿಂದೆಯಷ್ಟೇ ಈ ಉದ್ಯಾನ ಅಭಿವೃದ್ಧಿ ಪಡಿಸಲಾಗಿತ್ತು. ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದ ಮರದ ಕೊಂಬೆ ಬಿದ್ದು ಗೇಟ್ ಹಾಳಾಗಿತ್ತು. ಸರಿಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.