ADVERTISEMENT

ಬೆಂಗಳೂರು: 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 16:18 IST
Last Updated 23 ಫೆಬ್ರುವರಿ 2026, 16:18 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡದ ಅಳತೆಯನ್ನು ವಾಸ್ತವಕ್ಕಿಂತ ಕಡಿಮೆ ನಮೂದಿಸಿ, ತೆರಿಗೆ ವಂಚಿಸಿರುವ ಸುಮಾರು 13,600 ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐಟಿ ವಿಭಾಗವು ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ) ಸಹಯೋಗದಲ್ಲಿ ಐದು ನಗರ ಪಾಲಿಕೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಜಿಪಿಎಸ್ ತಂಡದ ವಿಶೇಷ ಮನೆ-ಮನೆ ಭೇಟಿ ಮೂಲಕ ಆಸ್ತಿ ತೆರಿಗೆ ಮರುಪರಿಶೀಲನೆ ಕಾರ್ಯದ 2ನೇ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ. 

ADVERTISEMENT

‘ಜಿಪಿಎಸ್‌ ಹಾಗೂ ವಿಶೇಷ ಮನೆ–ಮನೆ ಸಮೀಕ್ಷೆ ತಂಡದ ಮಾಹಿತಿ ಆಧಾರದಲ್ಲಿ ಆಸ್ತಿಗಳ ತೆರಿಗೆ ಪರಿಷ್ಕರಿಸಲಾಗಿದೆ. ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಿ, ಸುಮಾರು ₹318 ಕೋಟಿ ತೆರಿಗೆ ವಸೂಲಿ ಮಾಡಲಾಗುತ್ತಿದೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಮೊದಲ ಮತ್ತು ಎರಡನೇ ಹಂತಗಳನ್ನು ಸೇರಿಸಿ ಒಟ್ಟು 23,600 ಆಸ್ತಿ ಮಾಲೀಕರಿಂದ ₹688 ಕೋಟಿ ತೆರಿಗೆ ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.