ADVERTISEMENT

ಗೀತಂ ವಿ.ವಿ–ಪೆನ್ ಸ್ಟೇಟ್ ವಿ.ವಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ಪ್ರೊ.ವೈ. ಗೌತಮ ರಾವ್ ಹಾಗೂ ಪ್ರೊ. ಡೇವಿಡ್ ಎಂ. ಕ್ಯಾಲೆಜೊ ಪೆರೆಜ್ ಒಡಂಬಡಿಕೆಗೆ ಸಹಿ ಹಾಕಿದ ದಾಖಲೆಗಳನ್ನು ಪ್ರದರ್ಶಿಸಿದರು. ಗೀತಂ ವಿವಿ ಪ್ರಾಧ್ಯಾಪಕರು ಹಾಗೂ ಪಿಎಸ್‌ಯು ನಿಯೋಗದ ಪ್ರತಿನಿಧಿಗಳು ಉಪಸ್ಥಿತರಿದ್ದರು</p></div>

ಪ್ರೊ.ವೈ. ಗೌತಮ ರಾವ್ ಹಾಗೂ ಪ್ರೊ. ಡೇವಿಡ್ ಎಂ. ಕ್ಯಾಲೆಜೊ ಪೆರೆಜ್ ಒಡಂಬಡಿಕೆಗೆ ಸಹಿ ಹಾಕಿದ ದಾಖಲೆಗಳನ್ನು ಪ್ರದರ್ಶಿಸಿದರು. ಗೀತಂ ವಿವಿ ಪ್ರಾಧ್ಯಾಪಕರು ಹಾಗೂ ಪಿಎಸ್‌ಯು ನಿಯೋಗದ ಪ್ರತಿನಿಧಿಗಳು ಉಪಸ್ಥಿತರಿದ್ದರು

   

ಬೆಂಗಳೂರು: ಸಂಶೋಧನೆ, ಬೋಧನೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಗೀತಂ ವಿಶ್ವವಿದ್ಯಾಲಯದ ಜತೆಗೆ ಅಮೆರಿಕದ ಪೆನ್ಸಿಲ್ವೇನಿಯದ ಪೆನ್‌ ಸ್ಟೇಟ್‌ ವಿಶ್ವ ವಿದ್ಯಾಲಯ (ಪಿಎಸ್‌ಯು) ಒಡಂಬಡಿಕೆ ಮಾಡಿಕೊಂಡಿದೆ. 

ಗೀತಂ ವಿ.ವಿ ವಿಶಾಖಪಟ್ಟಣದ ಕ್ಯಾಂಪಸ್‌ಗೆ ಶನಿವಾರ ಪಿಎಸ್‌ಯು ನಿಯೋಗ ಭೇಟಿ ನೀಡಿ, ಈ ಒಡಂಬಡಿಕೆಗೆ ಸಹಿ ಹಾಕಿತು. ಪಿಎಸ್‌ಯುನ ಕುಲಪತಿ ಪ್ರೊ. ಡೇವಿಡ್ ಎಂ. ಕ್ಯಾಲೆಜೊ ಪೆರೆಜ್ ನೇತೃತ್ವದಲ್ಲಿ ಅಧ್ಯಾಪಕರು ಕ್ಯಾಂಪಸ್‌ ವೀಕ್ಷಿಸಿದರು. ಗೀತಂ ವಿವಿ ಕೈಗೊಂಡ ಸಂಶೋಧನೆ ಹಾಗೂ ಸೌಲಭ್ಯಗಳ ಬಗ್ಗೆ ಸಹ ಕುಲಾಧಿಪತಿ ಪ್ರೊ.ವೈ. ಗೌತಮ ರಾವ್ ವಿವರಿಸಿದರು. 

ADVERTISEMENT

‘ವಿಶ್ವವಿದ್ಯಾನಿಲಯವು 16 ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. 300ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಶಾಲಾ ಶಿಕ್ಷಣ ಪ್ರಾರಂಭಿಸಲು ಯೋಜಿಸುತ್ತಿದೆ. ಗೀತಂ ವಿ.ವಿ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಜಾಗತಿಕ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ 40ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಜ್ಞಾನದ ಮೂಲವನ್ನು ಹೆಚ್ಚಿಸಲು ಅಂತರ
ರಾಷ್ಟ್ರೀಯ ಸಹಯೋಗ ಹೊಂದುತ್ತಿದ್ದೇವೆ’ ಎಂದು ಪ್ರೊ.ವೈ. ಗೌತಮ ರಾವ್ ಹೇಳಿದರು. 

ಗೀತಂನ ಶೈಕ್ಷಣಿಕ ದೃಷ್ಟಿಕೋನ ಮತ್ತು ಮೂಲಸೌಕರ್ಯವನ್ನು ಶ್ಲಾಘಿಸಿದ ಪ್ರೊ. ಡೇವಿಡ್ ಎಂ. ಕ್ಯಾಲೆಜೊ ಪೆರೆಜ್, ‘ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಪಿಎಸ್‌ಯು ಬದ್ಧವಾಗಿದೆ. ಈ ಒಪ್ಪಂದವು ಅಧ್ಯಾಪಕರ ವಿನಿಮಯ, ಜಂಟಿ ಸಂಶೋಧನೆ, ವೃತ್ತಿಪರ ತರಬೇತಿ ಕಾರ್ಯಕ್ರಮ, ವಿದೇಶದಲ್ಲಿ ಅಧ್ಯಯನ ಅವಕಾಶ, ವಿಚಾರ ಸಂಕಿರಣ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಉತ್ತೇಜಿಸಲಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.