ಬೆಂಗಳೂರು: ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇಂಡಿಯನ್ ಸೊಸೈಟಿ ಫಾರ್ ಕ್ವಾಲಿಟಿ (ಐಎಸ್‌ಕ್ಯು) ‘ಜೆಮ್ಷೆಡ್ ಜಿ ಟಾಟಾ ಪ್ರಶಸ್ತಿ’ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ನಡೆದ ಐಎಸ್‌ಕ್ಯು ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಆಧುನಿಕ ಭಾರತೀಯ ಕೈಗಾರಿಕಾ ಪಿತಾಮಹ ಎಂದು ಹೆಸರಾಗಿರುವ ಜೆಮ್ಷೆಡ್ ನುಝರ್ ವಾನ್ ಜಿ ಟಾಟಾ ಅವರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು ಭಾರತೀಯ ಸಮಾಜಕ್ಕೆ ಗುಣಮಟ್ಟ, ಬದ್ಧತೆ ಮತ್ತು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಉದ್ಯಮಿಗಳಿಗೆ ನೀಡಿ ಗೌರವಿಸಲಾಗುತ್ತದೆ.
ಐಎಸ್‌ಕ್ಯು ಅಧ್ಯಕ್ಷ ಜನಕ್ ಕುಮಾರ್ ಮೆಹ್ತಾ ಮಾತನಾಡಿ, ‘1978 ರಿಂದ ಭಾರತದಲ್ಲಿ ಜೀವವಿಜ್ಞಾನ ಆಂದೋಲನದಲ್ಲಿ ಮುಂಚೂಣಿಯಲ್ಲಿರುವ ಕಿರಣ್ ಮಜುಂದಾರ್ ಶಾ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಗ್ರಾಹಕರಿಗೆ ಸೇವೆ ಸಲ್ಲಿಸಲು ಬಯೋಕಾನ್ ಲಿಮಿಟೆಡ್ ಮತ್ತು ಸಂಬಂಧಿತ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಒಳಿತು ಮಾಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.