ADVERTISEMENT

ಗೀತಂ ಸ್ಕೂಲ್‌ ಆಫ್‌ ಎಜ್ಯುಕೇಷನ್‌ ಆರಂಭ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 15:52 IST
Last Updated 28 ಫೆಬ್ರುವರಿ 2026, 15:52 IST
ಹೈದರಾಬಾದ್‌ನಲ್ಲಿರುವ ಗೀತಂ ಡೀಮ್ಡ್‌ ಟು ಬಿ ಯೂನಿವರ್ಸಿಟಿ 
ಹೈದರಾಬಾದ್‌ನಲ್ಲಿರುವ ಗೀತಂ ಡೀಮ್ಡ್‌ ಟು ಬಿ ಯೂನಿವರ್ಸಿಟಿ    

ಬೆಂಗಳೂರು: ಗೀತಂ ಡೀಮ್ಡ್‌ ಟು ಬಿ ಯೂನಿವರ್ಸಿಟಿ ಹೈದರಾಬಾದ್‌ನಲ್ಲಿ ತನ್ನ ‘ಗೀತಂ ಸ್ಕೂಲ್‌ ಆಫ್ ಎಜ್ಯುಕೇಷನ್‌’ ಅನ್ನು ಪ್ರಾರಂಭಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ದೂರದೃಷ್ಟಿಯೊಂದಿಗೆ ಭವಿಷ್ಯದ ಬೋಧಕರನ್ನು ಸಿದ್ಧಪಡಿಸುವ ತನ್ನ ಬದ್ಧತೆಯನ್ನು ಸಾಧಿಸಲು ಇದು ಮೈಲುಗಲ್ಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹೊಸದಾಗಿ ಸ್ಥಾಪನೆಯಾಗಿರುವ ಸ್ಕೂಲ್‌ ಆಫ್ ಎಜ್ಯುಕೇಷನ್‌, ನಾಲ್ಕು ವರ್ಷಗಳ ಸಮಗ್ರ ‘ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳನ್ನು’ (ಐಟಿಇಪಿ) 2026–27ನೇ ಸಾಲಿನಿಂದ ಆರಂಭಿಸಲಿದೆ. ಈ ಬಿ.ಎಸ್ಸ್ಇ, ಬಿ.ಇಡಿ, ಮತ್ತು ಬಿಎ ಕೋರ್ಸ್‌ಗಳಲ್ಲಿ ಶಿಸ್ತುಬದ್ಧ ಜ್ಞಾನದ ಪಠ್ಯಕ್ರಮಗಳನ್ನು ವೃತ್ತಿಪರ ಶಿಕ್ಷಕರ ತರಬೇತಿಯೊಂದಿಗೆ ನೀಡಲಾಗುತ್ತದೆ. ಪ್ರತಿಯೊಂದು ಕೋರ್ಸ್‌ಗೆ ತಲಾ 50 ವಿದ್ಯಾರ್ಥಿಗಳಿಗೆ ಪ್ರವೇಶವಿರುತ್ತದೆ. ಐಟಿಇಪಿ ಮೂಲಕ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಇಂಗ್ಲಿಷ್‌ ಅಥವಾ ಸಮಾಜ ವಿಜ್ಞಾನದಲ್ಲಿ ಪರಿಣತಿ ಪಡೆಯಬಹುದು.

ADVERTISEMENT

‘ತತ್ವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನದ ಫೌಂಡೇಷನ್‌ ಕೋರ್ಸ್‌ಗಳನ್ನು  ಶೈಕ್ಷಣಿಕ ನೀತಿ, ಶಾಲಾ ಪರಿಸರ, ಮೌಲ್ಯಮಾಪನ ಪ್ರಕ್ರಿಯೆಗಳೊಂದಿಗೆ ಶೈಕ್ಷಣಿಕ ವರ್ಷದಲ್ಲಿ ರೂಪಿಸಲಾಗಿದೆ’ ಎಂದು ಗೀತಂನ ಸಹ ಕುಲಪತಿ ಪ್ರೊ. ಡಿ.ಎಸ್‌. ರಾವ್‌  ತಿಳಿಸಿದ್ದಾರೆ. ಮಾಹಿತಿಗೆ www.gitam.edu

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.