ADVERTISEMENT

ಜಾಗತಿಕ ಅಂಧತ್ವ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 22:08 IST
Last Updated 6 ಫೆಬ್ರುವರಿ 2025, 22:08 IST
   

ಬೆಂಗಳೂರು: ಭಾರತ–ಏಕ್‌ ಕದಮ್‌ ಔರ್‌ ಫೌಂಡೇಶನ್‌ ಫಾರ್‌ ಎಜುಕೇಶನ್‌ ಆ್ಯಂಡ್‌ ಹೆಲ್ತ್‌ ವತಿಯಿಂದ ಫೆಬ್ರುವರಿ 7 ಮತ್ತು 8ರಂದು ಸರ್ಜಾಪುರ ರಸ್ತೆಯ ದೊಡ್ಡಕನ್ನೆಲ್ಲಿಯಲ್ಲಿರುವ ವಿಪ್ರೊ ಕಾರ್ಪೊರೇಟ್‌ ಕಚೇರಿಯಲ್ಲಿ ‘ಎರಡನೇ ಜಾಗತಿಕ ಅಂಧತ್ವ ಸಮ್ಮೇಳನ’ ನಡೆಯಲಿದೆ.

ಈ ಸಮ್ಮೇಳನವನ್ನು ಸಂಸ್ಥೆಯ ‘ಅರುಣೋದಯ’ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.
ಅಂಧರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ ಅವಕಾಶಗಳು ಹಾಗೂ ಸಮಗ್ರ ಬೆಂಬಲ ನೀಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇಲ್ಲಿ ಅಂಧರ ಶೈಕ್ಷಣಿಕ ಸಬಲೀಕರಣ, ತಂತ್ರಜ್ಞಾನ ಹಾಗೂ ನೀತಿಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT