ADVERTISEMENT

ಬೆಂಗಳೂರು | ಮನೆ, ಕಚೇರಿ ಬೀಗ ಒಡೆದು ಕಳವು: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 15:12 IST
Last Updated 17 ಆಗಸ್ಟ್ 2024, 15:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮನೆ ಮತ್ತು ಕಚೇರಿಗಳ ಬೀಗ ಒಡೆದು ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲಸೂರು ನಿವಾಸಿಗಳಾದ ಅಜಯ್‌ (24), ಅರುಣ್‌ (23), ಪ್ರತಾಪ್ (25), ಸಾಯಿ ಅಲಿಯಾಸ್ ಅಪ್ಪು (25) ಬಂಧಿತರು. ಇವರಿಂದ 24 ಗ್ರಾಂ ತೂಕದ ಚಿನ್ನಾಭರಣ, ₹ 4 ಲಕ್ಷ ಮೌಲ್ಯದ 11 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಜೂನ್ 30ರಂದು ಕಂಪನಿಯೊಂದರ ಬಾಗಿಲು ಮುರಿದು 20 ಲ್ಯಾಪ್‌ಟಾಪ್‌, ಯುಪಿಎಸ್‌ ಇನ್ವರ್ಟರ್‌ ಬ್ಯಾಟರಿಗಳು, ವಾಷ್ ರೂಂ ಟ್ಯಾಪ್‌ಗಳು ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹಲಸೂರಿನ ಲಕ್ಷ್ಮೀಪುರ ಹರಿಶ್ಚಂದ್ರ ಸ್ಮಶಾನದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯದಲ್ಲಿ ಮತ್ತಿಬ್ಬರು ಭಾಗಿಯಾಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.