ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು
ಬೆಂಗಳೂರು: ಸುನ್ನಿ ಸಂಘಟನೆಗಳ ಅಧೀನದಲ್ಲಿ ಖುದ್ದುಸಾಬ್ ಈದ್ಗಾ ಮೈದಾನದಲ್ಲಿ ರೂಹಾನಿ ಇಜ್ತಿಮಾ ಶುಕ್ರವಾರ ನಡೆಯಿತು.
ಇಜ್ತಿಮಾದ ಭಾಗವಾಗಿ ನಡೆದ ಗ್ರ್ಯಾಂಡ್ ಇಫ್ತಾರ್ ಸಂಗಮದಲ್ಲಿ ರಾಜ್ಯದ ವಿವಿಧ ಭಾಗಗಳ ಜನ ಭಾಗಿಯಾಗಿದ್ದರು. ಇಫ್ತಾರ್‌ಗಾಗಿ ವಿವಿಧ ಮದರಸಾಗಳಿಂದ ಸಿಹಿತಿಂಡಿಗಳ ಸಂಗ್ರಹಿಸಲಾಗಿತ್ತು.
ಶುಕ್ರವಾರ ಸಂಜೆ ಆರಂಭವಾದ ಕಾರ್ಯಕ್ರಮ ಶನಿವಾರ ಮುಂಜಾನೆವರೆಗೂ ನಡೆಯಿತು. ಫ್ಯಾಮಿಲಿ ಮೀಟ್, ಧಾರ್ಮಿಕ ಸಮಾವೇಶ ಸೇರಿ ರಾತ್ರಿ ಪೂರ್ತಿ ವಿವಿಧ ಅಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಸೈಯ್ಯದ್ ಇಬ್ರಾಹಿಂ ಬಾಫಾಕಿ ತಂಙಳ್, ಡಾ. ಅಬ್ದುಲ್ ಹಕೀಮ್ ಅಝ್ಹರಿ, ಎನ್.ಕೆ. ಎಂ ಶಾಫಿ ಸಅದಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ಮಾಜಿ ಸಚಿವ ರೋಶನ್ ಬೇಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.