ADVERTISEMENT

ಅತಿಥಿ ಉಪನ್ಯಾಸಕರಿಗೆ ಕನಿಷ್ಠ ಗೌರವಧನ

10 ತಿಂಗಳು ಉಪನ್ಯಾಸಕ ವೃತ್ತಿ, 2 ತಿಂಗಳು ಕೂಲಿ

ಎಂ.ಜಿ.ಬಾಲಕೃಷ್ಣ
Published 20 ಸೆಪ್ಟೆಂಬರ್ 2019, 20:15 IST
Last Updated 20 ಸೆಪ್ಟೆಂಬರ್ 2019, 20:15 IST
   

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ದೇಶದಲ್ಲೇಕನಿಷ್ಠ ಪ್ರಮಾಣದಲ್ಲಿ ಗೌರವಧನ ನೀಡುತ್ತಿರುವುದುಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಇಂತಹ 13,500ರಷ್ಟು ಅತಿಥಿ ಉಪನ್ಯಾಸಕರಿದ್ದು, ಬಹುತೇಕ ಮಂದಿಗೆ ₹11ರಿಂದ ₹ 13 ಸಾವಿರ ಗೌರವಧನ ಮಾತ್ರ ಸಿಗುತ್ತಿದೆ.

ಅತಿಥಿ ಉಪನ್ಯಾಸಕರಿಗೆ ಕನಿಷ್ಠ ₹25 ಸಾವಿರ ಗೌರವಧನ ನೀಡಬೇಕು ದುವಿಶ್ವವಿದ್ಯಾಲಯ ಧನಸಹಾಯ ಆಯೋಗ ಸೂಚಿಸಿದ್ದರೂ ರಾಜ್ಯದಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ಬಹುತೇಕ ಕಾಲೇಜುಗಳು ತಿಂಗಳ ಮೊದಲ ವಾರ ಗೌರವಧನ ಕೊಡುವುದನ್ನೇ ಮರೆತು
ಬಿಟ್ಟಿವೆ ಎಂದು ಗೋಳು ತೋಡಿ ಕೊಂಡಿದ್ದಾರೆ.

ADVERTISEMENT

‘ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲ. ಕುಟುಂಬಕ್ಕೆ ನೆರವಾಗುವ ಪ್ರಶ್ನೆಯೂ ಇಲ್ಲ. 10 ತಿಂಗಳು ಪಾಠ ಮಾಡಿ ದರೆ, ಉಳಿದ ಎರಡು ತಿಂಗಳು ಹೊಟ್ಟೆ ಹೊರೆಯಲು ಕೂಲಿ, ಗಾರೆ ಕೆಲಸ, ಬಾರ್‌ಗಳಲ್ಲಿ ಸಪ್ಲೈ ಕೆಲಸ ಅನಿವಾರ್ಯ ವಾಗಿದೆ, ಇಷ್ಟಾಗಿಯೂ ಅವರಿಗೆ ಮುಂದಿನ ವರ್ಷ ಅದೇ ಕಾಲೇಜಿನಲ್ಲಿ ಕೆಲಸ ಸಿಗುವ ಖಾತರಿ ಇಲ್ಲ, ಅವರೇ ಕಲಿಸಿದ ವಿದ್ಯಾರ್ಥಿಗಳ ಜತೆಗೇ ಮತ್ತೆ ಸಂದರ್ಶನ ಎದುರಿಸಬೇಕು’ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು.

‘ಉದ್ಯೋಗ ಭದ್ರತೆ ಕೊಡಿ, ಹಂತಹಂತವಾಗಿ ನಮ್ಮನ್ನು ಕಾಯಂಗೊಳಿಸಿ, ತಿಂಗಳ ಮೊದಲನೇ ವಾರದಲ್ಲಿ ಸಂಬಳ ಬಿಡುಗಡೆ ಮಾಡಿ, 12 ತಿಂಗಳ ಉದ್ಯೋಗ ನೀಡಿ ಎಂಬುದು ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.