ADVERTISEMENT

ಕೋವಿಡ್‌–19 ಭೀತಿ ನಡುವೆಯೇ ಎಚ್‌1ಎನ್‌1 ಸೋಂಕಿನ ಶಂಕೆ: ಐಟಿ ವಲಯದಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:19 IST
Last Updated 6 ಮಾರ್ಚ್ 2020, 20:19 IST
   

ಬೆಂಗಳೂರು: ಕೋವಿಡ್‌–19 ಭೀತಿ ನಡುವೆಯೇ ನಗರದಎರಡು ಪ್ರಮುಖ ಕಂಪನಿಗಳ ಉದ್ಯೋಗಿಗಳಲ್ಲಿ ಎಚ್‌1ಎನ್‌1 ಸೋಂಕಿನ ಶಂಕೆ ಕಾಣಿಸಿಕೊಂಡಿದೆ.

ಇ-ಕಾಮರ್ಸ್ ಕಂಪನಿಯಾದ ಅಮೆಜಾನ್‌ನ ಬೆಂಗಳೂರು ಕಚೇರಿಯ ಇಬ್ಬರು ಉದ್ಯೋಗಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಅನಾರೋಗ್ಯದಿಂದ ಅವರು ಕೆಲವು ದಿನಗಳಿಂದ ಕಚೇರಿಗೆ ಬರುತ್ತಿರಲಿಲ್ಲ. ಅದೇ ರೀತಿ,ಮರ್ಸಿಡಿಸ್ ಬೆಂಜ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಇಂಡಿಯಾ ಕಂಪನಿಯಲ್ಲಿಯೂ ಈ ರೀತಿ ಪ್ರಕರಣ ವರದಿಯಾಗಿದೆ ಎಂದು ಹೇಳಲಾಗಿದೆ.

‘ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆನಮ್ಮ ಮೊದಲ ಆದ್ಯತೆ. ಮುಂಜಾಗ್ರತಾ ಕ್ರಮವಾಗಿ ಬ್ರಿಗೇಡ್ ಟೆಕ್ ಗಾರ್ಡನ್‌ನಲ್ಲಿನ ನಮ್ಮ ಕಚೇರಿಯನ್ನು ಸ್ಚಚ್ಛಗೊಳಿಸಲಾಗಿದೆ. ಒಂದು ವೇಳೆ ಅನಾರೋಗ್ಯಕ್ಕೆ ಒಳಗಾದರೂ ಅವರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು’ ಎಂದು ಮರ್ಸಡಿಸ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಕೆಲ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.