ADVERTISEMENT

ಬೆಣ್ಣಗೆರೆ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:55 IST
Last Updated 24 ಜುಲೈ 2024, 16:55 IST
ಬೆಣ್ಣಗೆರೆ ಕೆರೆಯನ್ನು ಅಭಿವೃದ್ಧಿ ಮಾಡಿ ಗ್ರಾಮಸ್ಥರಿಗೆ ಬಿಟ್ಟುಕೊಡಲಾಯಿತು
ಬೆಣ್ಣಗೆರೆ ಕೆರೆಯನ್ನು ಅಭಿವೃದ್ಧಿ ಮಾಡಿ ಗ್ರಾಮಸ್ಥರಿಗೆ ಬಿಟ್ಟುಕೊಡಲಾಯಿತು   

ದಾಬಸ್ ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಪುನರುಜ್ಜೀವನಗೊಂಡ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಬೆಣ್ಣಗೆರೆ ಗ್ರಾಮದ ಕೆರೆಯನ್ನು ಗ್ರಾಮಸ್ಥರಿಗೆ ಬಿಟ್ಟುಕೊಡಲಾಯಿತು.

‘ನಮ್ಮ ಪೂರ್ವಜರು ಊರಿಗೊಂದು ಕೆರೆ ನಿರ್ಮಿಸಿ. ಅದರ ಸುತ್ತಲೂ ಮರ ಗಿಡಗಳನ್ನು ಬೆಳೆಸುವ ಮೂಲಕ ಪ್ರಕೃತಿ ಸಮತೋಲನಕ್ಕೆ ಕಾರಣರಾಗಿದ್ದರು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಉಬಾರಪ್ಪ ತಿಳಿಸಿದರು.

ಕೆರೆ ಉಳಿದರೆ ಅಂತರ್ಜಲ ಹೆಚ್ಚುತ್ತದೆ. ಮರ ಗಿಡಗಳಿಂದ ಮಳೆಯಾಗುತ್ತದೆ. ಗ್ರಾಮದ ಜನ ಸ್ವಇಚ್ಛೆಯಿಂದ ಕೆರೆ ಉಳಿಸುವ, ಮರ ಗಿಡಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸುಜಾತಾ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾರಾಣಿ, ಕೃಷಿ ಅಧಿಕಾರಿ ಉಮೇಶ್, ಮೇಲ್ವಿಚಾರಕ ಈರಣ್ಣ, ಸೇವಾ ಪ್ರತಿನಿಧಿ ರಾಜಣ್ಣ, ರಘುನಂದನ್, ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.