ADVERTISEMENT

ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ಹ್ಯಾಪಿನೆಸ್ ಪೆರೇಡ್ ನಾಳೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 16:22 IST
Last Updated 24 ಜನವರಿ 2026, 16:22 IST
   

ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ನಗರದಲ್ಲಿ ಹ್ಯಾಪಿನೆಸ್ ಪರೇಡ್ ‘ಹ್ಯಾಪಿ ಎಐಆರ್’ ಜ.25ರಂದು ಮಧ್ಯಾಹ್ನ 12ರಿಂದ ನಡೆಯಲಿದೆ. 

ಸಂತೋಷವನ್ನು ಹರಡುವ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಲವು ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಫ್ಲ್ಯಾಶ್ ಮಾಬ್‌ಗಳು, ಸಂಗೀತ, ನೃತ್ಯ ಮತ್ತು ಸಣ್ಣ ಹ್ಯಾಪಿನೆಸ್ ಗುಡಿಗಳನ್ನು ವಿತರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಧ್ಯಾಹ್ನ 12ಕ್ಕೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಕೆಂಪ್ ಫೋರ್ಟ್ ಮಾಲ್‌ನಲ್ಲಿ ಪ್ರಾರಂಭವಾಗಲಿದೆ. ಮಧ್ಯಾಹ್ನ 12.45ಕ್ಕೆ ಇಂದಿರಾನಗರ, ಮಧ್ಯಾಹ್ನ 1.45ಕ್ಕೆ ಕೋರಮಂಗಲ, ಮಧ್ಯಾಹ್ನ 2.40ಕ್ಕೆ ಬ್ರಿಗೇಡ್ ರಸ್ತೆ, 3.45ಕ್ಕೆ ಕಮರ್ಷಿಯಲ್ ಸ್ಟ್ರೀಟ್, ಸಂಜೆ 4.25ಕ್ಕೆ ಎಂ.ಜಿ ರಸ್ತೆಗಳಲ್ಲಿ ಪರೇಡ್‌ ಸಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.