ADVERTISEMENT

ಗುತ್ತಿಗೆ ಪೌರಕಾರ್ಮಿಕರಿಗೂ ಹೆಲ್ತ್‌ಕಾರ್ಡ್: ಜಿ.ಪರಮೇಶ್ವರ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 20:16 IST
Last Updated 1 ಫೆಬ್ರುವರಿ 2019, 20:16 IST
ಜಿ.ಪರಮೇಶ್ವರ
ಜಿ.ಪರಮೇಶ್ವರ    

ಬೆಂಗಳೂರು:‘ಕಾಯಂ ನೌಕರರಿಗೆ ನೀಡಿರುವಂತೆಗುತ್ತಿಗೆ ಪೌರ ಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್‌ಕಾರ್ಡ್‌ ಹಾಗೂ ಇತರೆಸೌಲಭ್ಯ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದುಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭರವಸೆ ನೀಡಿದರು.

ಗುತ್ತಿಗೆ ಪೌರ ಕಾರ್ಮಿಕ ಸಂಘಟನೆಯೊಂದಿಗೆ ಶುಕ್ರವಾರಸಭೆ ನಡೆಸಿದಬಳಿಕ ಮಾಧ್ಯಮದೊಂದಿಗೆ ಅವರುಮಾತನಾಡಿದರು.

‘ಸರ್ಕಾರಿ ರಜೆ,ಗರ್ಭಿಣಿಯರಿಗೆ ವೇತನ ಸಹಿತ ರಜೆ, 250 ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನುಗುತ್ತಿಗೆ ಪೌರಕಾರ್ಮಿಕರು ಹೇಳಿಕೊಂಡಿದ್ದಾರೆ. ಅವುಗಳನ್ನು ಪರಿಶೀಲಿಸುವೆ’ ಎಂದರು.

ADVERTISEMENT

ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಲ್ತ್‌ಕಾರ್ಡ್‌ ವಿತರಣೆಗಾಗಿ ಅಧಿಕಾರಿಗಳಿಗೆ ಸೂಚಿಸಿದರು.

‘ಪೌರಕಾರ್ಮಿಕರ ಹೆಸರಲ್ಲಿ‌ ಸಾಕಷ್ಟು ಸಂಘ–ಸಂಸ್ಥೆಗಳು ತಲೆ ಎತ್ತಿವೆ. ಹೀಗಾಗಿ,ನೋಂದಣಿಯಾಗಿರುವ ಸಂಘಗಳನ್ನಷ್ಟೇ ಗುರುತಿಸಿ, ಪೌರಕಾರ್ಮಿಕರ ಪ್ರತಿ ನಿರ್ಧಾರಕ್ಕೂಗುರುತಿಸಿದ ಒಂದೆರಡು ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ’ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.