ADVERTISEMENT

ಬೆಂಗಳೂರು | ರಾಜಧಾನಿಯಲ್ಲಿ ಆರ್ಭಟಿಸಿದ ಮಳೆ: ಹೊಳೆಯಂತಾದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 18:15 IST
Last Updated 1 ಆಗಸ್ಟ್ 2022, 18:15 IST
ಬೆಂಗಳೂರಿನಲ್ಲಿ ರಾತ್ರಿ ಸುರುದ ಮಳೆಗೆ ಬಳ್ಳಾರಿ ರಸ್ತೆ ಯಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರಿನಲ್ಲಿ ರಾತ್ರಿ ಸುರುದ ಮಳೆಗೆ ಬಳ್ಳಾರಿ ರಸ್ತೆ ಯಲ್ಲಿ ಟ್ರಾಫಿಕ್ ಜಾಮ್   

ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಲವು ರಸ್ತೆಗಳು ಹೊಳೆಯಂತೆ ಆಗಿದ್ದವು. ರಾತ್ರಿ 11.30 ಗಂಟೆಯಾದರೂ ಮಳೆ ನಿಂತಿರಲಿಲ್ಲ.

ಬಳ್ಳಾರಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ಮುಂದೆ ಸಾಗಲು ಸಾಧ್ಯವಾಗಲಿಲ್ಲ. ರಾತ್ರಿ ‌ಪಾಳಿ ಮುಗಿಸಿ‌ ಮನೆಗೆ ತೆರಳುವವರು ಪರದಾಟ ನಡೆಸಿದರು.

ಮೈಸೂರು ರಸ್ತೆಯ ಸ್ಯಾಟಲೈಟ್ ಸಮೀಪದ ಕಾಲುವೆಗಳಲ್ಲಿ ಅಪಾರ ಪ್ರಮಾಣದ ನೀರು‌ ಹರಿಯಿತು. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ರಸ್ತೆಯಲ್ಲೂ ಮಳೆಯ ನೀರು ಸಂಗ್ರಹಗೊಂಡಿತ್ತು.

ಜೆಸಿ ನಗರದ ದೂರದರ್ಶನದ ಬಳಿ ಆಟೊ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.

ಕುಮಾರಸ್ವಾಮಿಲೇಔಟ್, ಫೈಯಜಾಬಾದ್ ಹಾಗೂ ಯಲಚೇನಹಳ್ಳಿ ಭಾಗದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮತ್ತೆ ಅವಾಂತರ ಸೃಷ್ಟಿಯಾಯಿತು. ಶನಿವಾರ ರಾತ್ರಿ ‌ಸುರಿದ ಮಳೆಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಹ ಕಡಿತಗೊಂಡು ಜನರು ಸಂಕಷ್ಟ ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.