ADVERTISEMENT

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆ: ಮರಬಿದ್ದು ಕಾರುಗಳು ಜಖಂ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:50 IST
Last Updated 15 ಜೂನ್ 2022, 4:50 IST
   

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿಯಿಂದ ನಸುಕಿನವರೆಗೂ ಮಳೆ ಸುರಿದಿದ್ದು, ಹಲವೆಡೆ ಮರಗಳು ಉರುಳಿಬಿದ್ದಿವೆ.

ಮೆಜೆಸ್ಟಿಕ್, ಗಾಂಧಿನಗರ, ಕಾಟನ್‌ಪೇಟೆ, ಚಿಕ್ಕಪೇಟೆ, ಸಂಪಂಗಿರಾಮನಗರ, ಶಾಂತಿನಗರ, ಎಸ್.ಜೆ.ಪಾರ್ಕ್, ಚಾಮರಾಜಪೇಟೆ ಹಾಗೂ ಸುತ್ತಮುತ್ತ ಜೋರು ಮಳೆ ಆಗಿದೆ.

ಮಳೆ ವೇಲೆ ಕೆಲವೆಡೆ ಜೋರು ಗಾಳಿಯೂ ಬೀಸಿತು. ಇದರಿಂದಾಗಿ ಕೆಲವೆಡೆ ಮರಗಳು ಹಾಗೂ ಕೊಂಬೆಗಳು ನೆಲಕ್ಕುರುಳಿ ರಸ್ತೆಯಲ್ಲಿ ಬಿದ್ದಿದ್ದವು. ಅವುಗಳನ್ನು ಬಿಬಿಎಂಪಿ ಸಿಬ್ಬಂದಿ ಹಾಗೂ ಸ್ಥಳೀಯರು ತೆರವುಗೊಳಿಸಿದರು.

ADVERTISEMENT

ಎಸ್.ಜೆ.ಪಾರ್ಕ್ ಬಳಿ ಮರವೊಂದು ರಸ್ತೆಯಲ್ಲಿ ಕಾರುಗಳ ಮೇಲೆಯೇ ಉರುಳಿ ಬಿದ್ದಿದೆ. ಮರದ ಅವಶೇಷಗಳಡಿ ಸಿಲುಕಿ ನಾಲ್ಕು ಕಾರುಗಳು ಭಾಗಶಃ ಜಖಂಗೊಂಡಿವೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.