ADVERTISEMENT

ಹೈಕೋರ್ಟ್‌: ವಾಹನ ನಿಲುಗಡೆಗೆ ಸ್ಟಿಕ್ಕರ್‌, ವಕೀಲರ ಸಂಘದ ಯೋಜನೆಗೆ ಸಿಜೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:24 IST
Last Updated 19 ಆಗಸ್ಟ್ 2022, 4:24 IST
ಬೆಂಗಳೂರು ವಕೀಲರ ಸಂಘ ಗುರುವಾರ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ (ಎಡದಿಂದ ಮೂರನೇಯವರು) ವಕೀಲರ ವಾಹನಗಳ ಪಾರ್ಕಿಂಗ್ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದರು. ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಹಾಗೂ ಖಜಾಂಚಿ ಹರೀಶ ಎಂ.ಟಿ. ಇದ್ದಾರೆ. -ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯ ಹೈಕೋರ್ಟ್‌ ಸೇರಿ ಬೆಂಗಳೂರಿನ ನಾಲ್ಕೂ ಕೋರ್ಟ್‌ ಘಟಕಗಳಲ್ಲಿಬಾಂಬೆ ಮತ್ತು ದೆಹಲಿ ಹೈಕೋರ್ಟ್‌ಗಳ ಮಾದರಿಯಲ್ಲಿನ ವಕೀಲರ ಸಂಘದ ಸ್ಟಿಕ್ಕರ್‌ ಹೊಂದಿದ ವಾಹನ ನಿಲುಗಡೆ ವ್ಯವಸ್ಥೆಯನ್ನು ಸೆಪ್ಟೆಂಬರ್ 15ರಿಂದ ‌ಜಾರಿಗೆ ತರಲಾಗುತ್ತಿದೆ.

ಬೆಂಗಳೂರು ವಕೀಲರ ಸಂಘದ ವತಿಯಿಂದ ಜಾರಿಗೆ ತರಲಾಗಿರುವ ಈ ನೂತನ ಆ್ಯಪ್‌ ತಂತ್ರಜ್ಞಾನ ಆಧಾರಿತ ಪದ್ಧತಿಗೆ ಸಂಘದ ಸದಸ್ಯರಿಗೆ ನೀಡಲಾಗುವ ಸ್ಟಿಕ್ಕರ್‌ಗಳು ಕಡ್ಡಾಯ.ಈ ಸ್ಟಿಕ್ಕರ್‌ಗಳ ಲಾಂಛನವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಗುರುವಾರ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ನಡೆದ ಸಮಾ ರಂಭದಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ‘ಹೊಸ ಸ್ಟಿಕ್ಕರ್‌ ವ್ಯವಸ್ಥೆಯಿಂದ ಇನ್ನು ಮುಂದೆ ಹೈಕೋರ್ಟ್, ಸಿಟಿ ಸಿವಿಲ್‌ ಕೋರ್ಟ್, ಎಸಿಎಂಎಂ ಕೋರ್ಟ್‌ ಹಾಗೂ ಮೆಯೊ ಹಾಲ್‌ಗಳಲ್ಲಿನ ವಾಹನ ನಿಲುಗಡೆ ಸಮಸ್ಯೆ ಬಹುತೇಕ ನಿರಾಳವಾಗಲಿದೆ’ ಎಂದರು.

ADVERTISEMENT

ಸ್ಟಿಕ್ಕರ್‌ ಬಳಕೆ ವಾಹನ ನಿಲುಗಡೆ ಯೋಜನೆಯ ಕಾರ್ಯಭಾರದ ನೇತೃತ್ವ ವಹಿಸಿದ್ದ ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಮಾತನಾಡಿ, ‘ಇಂದು ವಕೀಲರಲ್ಲಿ ವಾಹನ ಖರೀದಿ ಪ್ರಮಾಣ ಹೆಚ್ಚಿದೆ. ಹಾಗಾಗಿ, ಈಗ ರೂಪಿಸಲಾಗಿರುವ ಆ್ಯಪ್‌ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಸಂಪೂರ್ಣ ದೋಷರಹಿತವಾಗಿದ್ದು, ಇನ್ನು ಮುಂದೆ ಕೋರ್ಟ್‌ಗಳಲ್ಲಿ ಬೇಕಾಬಿಟ್ಟಿ ವಾಹನಗಳ ಪ್ರವೇಶ ಮತ್ತು ಜಾಗದ ಸಮಸ್ಯೆ ಇರುವುದಿಲ್ಲ’ ಎಂದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ, ‘ಸಂಘದ ಕಾರ್ಯ ಶ್ಲಾಘನೀಯ. ಯೋಜನೆಯ ಪರಿಣಾ ಮಕಾರಿ ಅನುಷ್ಠಾನಕ್ಕೆ ವಕೀಲರು ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.