ADVERTISEMENT

ಎರಡನೇ ದಿನವೂ ಮುಗಿಬಿದ್ದ ಪಾನ ಪ್ರಿಯರು: ₹197 ಕೋಟಿ ಮೌಲ್ಯದ ಮದ್ಯ ಮಾರಾಟ

ದಾಖಲೆ ಸೃಷ್ಟಿಸಿದ ಮದ್ಯ ವಹಿವಾಟು

​ಪ್ರಜಾವಾಣಿ ವಾರ್ತೆ
Published 6 ಮೇ 2020, 3:03 IST
Last Updated 6 ಮೇ 2020, 3:03 IST
   

ಬೆಂಗಳೂರು: ಪಾನ ಪ್ರಿಯರು ಎರಡನೇ ದಿನವೂ ಮದ್ಯ ಖರೀದಿಗಾಗಿ ಮುಗಿಬಿದ್ದರು. ಮಂಗಳವಾರ ರಾಜ್ಯದಲ್ಲಿ ₹197 ಕೋಟಿಯಷ್ಟು ದಾಖಲೆಯ ವಹಿವಾಟು ನಡೆದಿದೆ.

ಲಾಕ್‌ಡೌನ್‌ ಬಳಿಕ ಸೋಮವಾರ ತೆರೆದ ಮದ್ಯದ ಅಂಗಡಿಗಳು ₹45 ಕೋಟಿ ವಹಿವಾಟು ನಡೆಸಿದ್ದವು. ಎರಡನೇ ದಿನ ನಾಲ್ಕು ಪಟ್ಟುಗಿಂತ ಹೆಚ್ಚು ಮದ್ಯ ಮಾರಾಟವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ರಾಜ್ಯದಲ್ಲಿ ಸರಾಸರಿ ₹75 ಕೋಟಿಯಷ್ಟು ಮದ್ಯದ ವಹಿವಾಟು ನಡೆಯುತ್ತದೆ.

ಭಾರತೀಯ ತಯಾರಿಕಾ ಮದ್ಯ 36.37ಲಕ್ಷ ಲೀಟರ್‌ (4.21 ಲಕ್ಷ ಕಾರ್ಟನ್) ಬಿಯರ್‌ 7.02 ಲಕ್ಷ ಲೀಟರ್‌ (90 ಸಾವಿರ ಕೇಸ್‌) ಮಾರಾಟವಾಗಿದೆ. ಕಡಿಮೆ ಬೆಲೆಯ ಮದ್ಯದ ಬ್ರ್ಯಾಂಡ್‌ಗಳು ಮಂಗಳವಾರ ಎಲ್ಲ ಕಡೆ ಲಭ್ಯವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.