ADVERTISEMENT

ಕೆ.ಆರ್.ಪುರ: ಹೊರಮಾವು ಅಗರ ಕೆರೆ ಸ್ವಚ್ಚತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 19:41 IST
Last Updated 1 ಮಾರ್ಚ್ 2026, 19:41 IST
ಹೊರಮಾವು ಅಗರ ಕೆರೆಯಲ್ಲಿ ನಡೆದ ಕೆರೆ ನಡಿಗೆ ಅಭಿಯಾನದಲ್ಲಿ ಸಾರ್ವಜನಿಕರಿಗೆ ಕಸದ ನಿರ್ವಹಣೆ ಬಗ್ಗೆ ತಿಳಿಸಲಾಯಿತು
ಹೊರಮಾವು ಅಗರ ಕೆರೆಯಲ್ಲಿ ನಡೆದ ಕೆರೆ ನಡಿಗೆ ಅಭಿಯಾನದಲ್ಲಿ ಸಾರ್ವಜನಿಕರಿಗೆ ಕಸದ ನಿರ್ವಹಣೆ ಬಗ್ಗೆ ತಿಳಿಸಲಾಯಿತು   

ಕೆ.ಆರ್.ಪುರ: ಪ್ಲಾಸ್ಟಿಕ್ ಮುಕ್ತ ಕೆರೆ ಅಂಗವಾಗಿ ಹೊರಮಾವು ಅಗರ ಕೆರೆ ಅಂಗಳದಲ್ಲಿ ಪರಿಸರ ಪ್ರೇಮಿಗಳು ಕೆರೆಯ ಅಂಚಿನಲ್ಲಿ ಕೆರೆ ನಡಿಗೆ ಹಮ್ಮಿಕೊಂಡು ಕೆರೆ ಸುತ್ತಲೂ ಬಿದ್ದಿದ್ದ ಹಸಿ ಹಾಗೂ ಒಣ ಕಸ ಸಂಗ್ರಹಿಸಿದರು.

ಹೊರಮಾವು ಅಗರದ ಎಸ್.ಎಲ್.ಎಸ್ ಅಪಾರ್ಟ್‌ಮೆಂಟ್‌ನಿಂದ ಆರಂಭಗೊಂಡ ಕೆರೆ ನಡಿಗೆ ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳು, ಸುತ್ತಮುತ್ತಲಿನ ಶಾಲೆ ಮಕ್ಕಳು ಪಾಲ್ಗೊಂಡು ಕೆರೆಯ ಸುತ್ತಲೂ ಸ್ವಚ್ಛತೆ ಕಾಪಾಡುವ ಕುರಿತು ಜನರಿಗೆ ಮನವರಿಕೆ ಮಾಡಿದರು.

‘ಹಿರಿಯರು ಕಾಪಾಡಿಕೊಂಡು ಬಂದಿರುವ ಜಲಮೂಲ ಸಂರಕ್ಷಣೆ ಮಾಡಬೇಕಿದೆ. ಹೊರಮಾವು ಅಗರ ಕೆರೆ ಮಳೆಯಿಂದ ಮೈದುಂಬಿ ಹರಿದರೆ ಸುತ್ತಮುತ್ತಲಿನ ಬಡಾವಣೆಗಳಿಗೆ ಕೊಳವೆಬಾವಿಗಳಿಗೆ ಮರುಪೂರಣ ಆಗುತ್ತಿದೆ. ಇಂತಹ ಕೆರೆಯನ್ನು ಸಂರಕ್ಷಿಸಬೇಕಿದೆ’ ಎಂದು ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್ ಹೇಳಿದರು.

ADVERTISEMENT

ಅಭಿಯಾನದ ಸಂಯೋಜಕ ನಾಗರಾಜ್ ಮಾತನಾಡಿದರು. ಕೊಚಿ ಶಂಕರ್, ಶಾಫಿ, ಪುರುಷೋತ್ತಮಬಾಬು, ದೇವರಾಜ, ಸತೀಶ್ ಚಂದ್ರ ಅಪಾರ್ಟ್‌ಮೆಂಟ್‌  ಅಸೋಸಿಯೇಷನ್ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.