ADVERTISEMENT

ಕುದುರೆ ರೇಸ್‌ ಬೆಟ್ಟಿಂಗ್: ₹5.91 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:33 IST
Last Updated 30 ನವೆಂಬರ್ 2018, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 10 ಆರೋಪಿಗಳನ್ನು ಗುರುವಾರ ಬಂಧಿಸಿರುವ ಸಿಸಿಬಿ ಪೊಲೀಸರು, ₹5.91 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಜ್ಯೋತಿ ಬಸು, ಅಂಜಿನಪ್ಪ,ವಿನೋದ್ ಕುಮಾರ್,ಕಬೀರ್ ಅಹಮದ್,ನವಾಜ್ ಅಹಮದ್‍ಖಾನ್, ಹರೀಶ್, ತಿಮ್ಮರಾಜು, ಅಜಯ್ ಕುಮಾರ್,ಲಿಯಾಕತ್ ಹಾಗೂ ಕೇಶವ ಬಂಧಿತರು.

‘ರೇಸ್ ಕೋರ್ಸ್ ರಸ್ತೆಯ ಟರ್ಫ್ ಕ್ಲಬ್‍ನ ಗೇಟ್ ನಂಬರ್ 3ರ ಬಳಿ ಆರೋಪಿಗಳು, ಕುದುರೆ ರೇಸ್‌ಗೆ ಬೆಟ್ಟಿಂಗ್ ಕಟ್ಟಿ ಆಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ADVERTISEMENT

₹1.51 ಲಕ್ಷ ಜಪ್ತಿ:ಎಚ್‍ಎಸ್‍ಆರ್ ಲೇಔಟ್ ಬಳಿಯ ಮಂಗಮ್ಮನಪಾಳ್ಯ ಮುಖ್ಯರಸ್ತೆಯ ಶಶಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಂಬರ್ 1ರ ಕೊಠಡಿಯಲ್ಲಿ ಜೂಜು ಆಡುತ್ತಿದ್ದ 12 ಮಂದಿಯನ್ನು ಗುರುವಾರ ಬಂಧಿಸಿರುವ ಸಿಸಿಬಿ ಪೊಲೀಸರು, ಅವರಿಂದ ₹1.51 ಲಕ್ಷ ಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.