ಬೆಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸಂಸ್ಥೆ ಗ್ರಾಹಕರಿಗಾಗಿ ‘ಟಾಕ್ ಟು ಅಸ್’ ಅಭಿಯಾನಕ್ಕೆ ಚಾಲನೆ ನೀಡಿದೆ.
‘ಗ್ರಾಹಕರು ನಮ್ಮನ್ನು ಅವಲಂಬಿಸಿಲ್ಲ. ಆದರೆ ಗ್ರಾಹಕರನ್ನು ನಾವು ಅವಲಂಬಿಸಿದ್ದೇವೆ’ ಎಂಬ ಮಹಾತ್ಮ ಗಾಂಧೀಜಿ ಅವರ ತತ್ವದ ಅಡಿಯಲ್ಲಿ ಈ ಅಭಿಯಾನ ಆರಂಭಗೊಂಡಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ಮುಕ್ತವಾಗಿ ಪ್ರಶ್ನೆಗಳನ್ನು ಕೇಳಬಹುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯ ಡಿಜಿಎಂ ಶುಭಾಂಕರ್ ದತ್ತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.