ADVERTISEMENT

ಕ್ವಾರ್ಟರ್ಸ್‌ ಇದ್ದರೆ ಪತಿ--–ಪತ್ನಿಗೆ ಮನೆ ಬಾಡಿಗೆ ಭತ್ಯೆ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:52 IST
Last Updated 20 ಸೆಪ್ಟೆಂಬರ್ 2019, 19:52 IST

ಬೆಂಗಳೂರು: ಪತಿ–ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಹಾಗೂ ಒಬ್ಬರಿಗೆ ಸರ್ಕಾರಿ ಮನೆ (ಕ್ವಾರ್ಟರ್ಸ್‌) ಸಿಕ್ಕಿದ್ದಲ್ಲಿ ಇಬ್ಬರಿಗೂಮನೆ ಬಾಡಿಗೆ ಭತ್ಯೆ ಸಿಗುವುದಿಲ್ಲ.ರಾಜ್ಯದಲ್ಲಿಎಲ್ಲ ಸರ್ಕಾರಿ, ಅನುದಾನ ಪಡೆಯುವ ಸಂಸ್ಥೆಗಳಿಗೆ ಇದು ಅನ್ವಯ ಎಂದು ತಿಳಿಸಲಾಗಿದೆ.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪತಿ, ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೂ, ಪತಿಗೆ ಕ್ವಾರ್ಟರ್ಸ್‌ ಲಭಿಸಿತ್ತು.

ಆದರೆ ಶಿಕ್ಷಕಿಬಾಡಿಗೆ ಭತ್ಯೆ ಪಡೆಯುತ್ತಿರುವುದು ಗಮನಕ್ಕೆ ಬಂದಿತ್ತು. ಇದನ್ನು ಪರಿಶೀಲಿಸಿದ ಡಿಡಿಪಿಐ ಅವರು ಮನೆ ಬಾಡಿಗೆ ಭತ್ಯೆ ರೂಪದಲ್ಲಿ ನೀಡಲಾದ ₹ 4.59 ಲಕ್ಷ ಹಣವನ್ನು ಕಡಿತಗೊಳಿಸಲು ಸೂಚನೆ ನೀಡಿ ಆದೇಶ ನೀಡಿದ್ದರು.

ADVERTISEMENT

‘ಇದು ರಾಜ್ಯದ ಎಲ್ಲ ಇಲಾಖೆಗಳಿಗೂ ಅನ್ವಯವಾಗುವ ನಿಯಮ. ಪತಿ, ಪತ್ನಿ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿ ಕೆಲಸದಲ್ಲಿ ಇದ್ದರೆ ಅವರಿಗೆ ಇಬ್ಬರಿಗೂ ಮನೆ ಬಾಡಿಗೆ ಭತ್ಯೆ ಸಿಗುತ್ತದೆ. ಆದರೆ ಒಂದೇ ಕಡೆ ಇದ್ದು, ಒಬ್ಬರು ಸರ್ಕಾರಿ ಕ್ವಾರ್ಟರ್ಸ್‌ ನಲ್ಲಿ ಇದ್ದರೆ ಇಬ್ಬರಿಗೂ ಭತ್ಯೆ ಇಲ್ಲ. ಹೀಗಿದ್ದರೂ, ಹಲವಾರು ಮಂದಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಗಮನಕ್ಕೆ ಬಂದ ಪ್ರಕರಣಗಳಲ್ಲಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ನಿಯಮ ಈಗಾಗಲೇ ಜಾರಿಯಲ್ಲಿದೆ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌. ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.