ADVERTISEMENT

ಹೆಚ್ಚು ಕಾಲೇಜು: 8ನೇ ಸ್ಥಾನದಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 22:36 IST
Last Updated 17 ಫೆಬ್ರುವರಿ 2020, 22:36 IST
ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಮುಕ್ತ ವಿಶ್ವವಿದ್ಯಾಲಯದ ವಿಜಯಪುರದ ಪ್ರಾದೇಶಿಕ ನಿರ್ದೇಶಕ ಡಾ. ಎ. ವರದರಾಜನ್, ಟಿ.ಎಂ. ವಿಜಯಭಾಸ್ಕರ್, ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಜಿ.ಎಚ್. ಇಮ್ರಾಪುರ್ ಇದ್ದರು -ಪ್ರಜಾವಾಣಿ ಚಿತ್ರ
ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಮುಕ್ತ ವಿಶ್ವವಿದ್ಯಾಲಯದ ವಿಜಯಪುರದ ಪ್ರಾದೇಶಿಕ ನಿರ್ದೇಶಕ ಡಾ. ಎ. ವರದರಾಜನ್, ಟಿ.ಎಂ. ವಿಜಯಭಾಸ್ಕರ್, ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಜಿ.ಎಚ್. ಇಮ್ರಾಪುರ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಹೆಚ್ಚು ಕಾಲೇಜುಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹೇಳಿದರು.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಬೆಂಗಳೂರು, ವಿಜಯಪುರ ಪ್ರಾದೇಶಿಕ ಪದವೀಧರರ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ ‌ದೇಶದಲ್ಲಿ 20 ವಿಶ್ವವಿದ್ಯಾಲಯಗಳು, 500 ಕಾಲೇಜುಗಳಿದ್ದವು. ಇವುಗಳಲ್ಲಿ 2.3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. 2018-19ರ ಸರ್ವೆ ಪ್ರಕಾರ ಈಗ ದೇಶದಲ್ಲಿ 993 ವಿಶ್ವವಿದ್ಯಾಲಯಗಳಿದ್ದು, 3.74 ಕೋಟಿ ವಿದ್ಯಾರ್ಥಿಗಳಿದ್ದಾರೆ’ ಎಂದರು.

ADVERTISEMENT

‘ಮುಕ್ತ ವಿಶ್ವವಿದ್ಯಾಲಯದ ಪರಿಕಲ್ಪನೆ ವಿಶ್ವದಾದ್ಯಂತ‌ ಜನಪ್ರಿಯತೆ ಗಳಿಸಿದೆ. ಗುಣಮಟ್ಟದ ಶಿಕ್ಷಣಕ್ಕೂ ಅವು ಆದ್ಯತೆ ನೀಡುತ್ತಿವೆ’ ಎಂದು ಹೇಳಿದರು.

ಪದವಿ ಪ್ರದಾನ: ಬೆಂಗಳೂರಿನ 4,028 ಮತ್ತು ವಿಜಯಪುರದ 859 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ರಿಬಾ ಮಾರಿಯಾ ಕುರಿಯನ್ (ಎಂಎ ಸೈಕಾಲಜಿ), ಸಿ.ಆರ್. ಶಿಲ್ಪಾ (ಬಿ.ಇಡಿ), ವರ್ಸೆಲಿನ್ ತೆಲಾಸ್ ಮೇರಿ ಎ (ಬಿಎಸ್ಸಿ ನರ್ಸಿಂಗ್), ರಿಚು ಹ್ಯಾರಿಸ್ (ಡಿಪ್ಲೊಮಾ ಇನ್ ಅರ್ಲಿ ಚೈಲ್ಡ್ ಹುಡ್ ಕೇರ್ ಆ್ಯಂಡ್ ಎಜುಕೇಶನ್), ಮಾನಸಾ ಪರಮೇಶ್ವರ ಹೆಗಡೆ (ಪೌಷ್ಠಿಕ ಮತ್ತು ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೊಮಾ) ಚಿನ್ನದ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.