ADVERTISEMENT

ಬೆಂಗಳೂರಿನಲ್ಲಿ ಹೆಚ್ಚಿದ ಮನೆ ಬೆಲೆ; ದೆಹಲಿಯಲ್ಲಿ ನಕಾರಾತ್ಮಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 20:48 IST
Last Updated 11 ಏಪ್ರಿಲ್ 2021, 20:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬೆಲೆಯು 2020–21ರಲ್ಲಿ ಕೂಡ ಏರಿಕೆ ಆಗಿದೆ. 2020–21ನೇ ಸಾಲಿನ ಮೂರನೆಯ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ಮನೆಗಳ ಬೆಲೆಯಲ್ಲಿ ಶೇಕಡ 5ರಷ್ಟು ಹೆಚ್ಚಳ ಆಗಿದೆ ಎಂಬ ಮಾಹಿತಿ ಆರ್‌ಬಿಐ ನೀಡಿರುವ ಅಂಕಿ–ಅಂಶಗಳಲ್ಲಿ ಇದೆ.

ರಿಯಲ್ ಎಸ್ಟೇಟ್‌ ವಲಯದಲ್ಲಿನ ಆಸ್ತಿ ಮೌಲ್ಯವು ಹೆಚ್ಚಾಗಿದೆ. ಆದರೆ ಈ ಹೆಚ್ಚಳವು ಹಿಂದಿನ ಕೆಲವು ವರ್ಷಗಳಲ್ಲಿ ಆದ ಹೆಚ್ಚಳದಷ್ಟು ಇಲ್ಲ ಎಂಬುದನ್ನು ಈ ಅಂಕಿ–ಅಂಶಗಳು ವಿವರಿಸುತ್ತವೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಹಿರಿಯ ಶಾಖಾ ಅಧಿಕಾರಿ ಶಾಂತನು ಮಜುಂದಾರ್ ಹೇಳಿದರು.

‘ಸಂಪೂರ್ಣವಾಗಿ ಸಿದ್ಧವಾಗಿರುವ ಮನೆಗಳ ಬೆಲೆಯು ಕೋವಿಡ್–19 ಮತ್ತು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯ ಕಾರಣದಿಂದಾಗಿ ಹೆಚ್ಚಳವಾಗಿದೆ’ ಎಂದು ಹೇಳಿದರು.

ADVERTISEMENT

ದೆಹಲಿಯಲ್ಲಿ ಮನೆಗಳ ಬೆಲೆಯಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಮುಂಬೈನಲ್ಲಿ ಮೊದಲ ಎರಡು ತ್ರೈಮಾಸಿಕಗಳಲ್ಲಿ ಇಳಿಕೆ ಕಂಡಬಂದರೂ, ಮೂರನೆಯ ತ್ರೈಮಾಸಿಕದಲ್ಲಿ ಬೆಲೆಯಲ್ಲಿ ಏರಿಕೆ ಆಗಿದೆ. ಚೆನ್ನೈನಲ್ಲಿನ ಮನೆಗಳ ಬೆಲೆಯು ಮೊದಲ ಮೂರೂ ತ್ರೈಮಾಸಿಕಗಳಲ್ಲಿ ಇಳಿಕೆ ಕಂಡಿದೆ. ‘ಮೂರನೆಯ ತ್ರೈಮಾಸಿಕದ ನಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮವು ಚೇತರಿಕೆಯ ಹಾದಿಗೆ ಬಂದಿದೆ’ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.