ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 16:19 IST
Last Updated 31 ಡಿಸೆಂಬರ್ 2025, 16:19 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಮಾನ್ಯತೆ ಪಡೆದ ‘ಟೇಲ್ಸ್ ಬೈ ಪರಿ’ ಕೃತಿಯ ಯುವ ಲೇಖಕಿ ಪರಿಣಿತಾ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಮಾನ್ಯತೆ ಪಡೆದ ‘ಟೇಲ್ಸ್ ಬೈ ಪರಿ’ ಕೃತಿಯ ಯುವ ಲೇಖಕಿ ಪರಿಣಿತಾ   

ಬೆಂಗಳೂರು: ಬಸವನಗುಡಿಯ ಎನ್ಇಟಿ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪರಿಣಿತಾ ವಿರಚಿತ ‘ಟೇಲ್ಸ್ ಬೈ ಪರಿ’ ಕೃತಿಯು ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದು, ‘ಯುವ ಲೇಖಕಿ’ ಎಂಬ ಮನ್ನಣೆ ತಂದುಕೊಟ್ಟಿದೆ.

‘ಪರಿಣಿತಾ ಅಭಿವ್ಯಕ್ತಿ ಮತ್ತು ಕಥೆ ಹೆಣೆಯುವಿಕೆಯಲ್ಲಿ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದಾಳೆ. ಕಥಾ ಸಂಕಲನ 'ಟೇಲ್ಸ್ ಬೈ ಪರಿ'ಯು ವ್ಯಕ್ತಿ-ವ್ಯಕ್ತಿತ್ವ ಹಾಗೂ ಸಮಾಜದ ಸೂಕ್ಷ್ಮ ಕಥೆಗಳನ್ನು ಹೇಳುತ್ತದೆ. ಆಕೆಯ ಬರವಣಿಗೆ ಈಗ ದೇಶದ ಗಮನ ಸೆಳೆದಿದೆ. ಬಾಲ್ಯದಲ್ಲೇ ಬರವಣಿಗೆ ರೂಢಿಸಿಕೊಂಡು 10ನೇ ವಯಸ್ಸಿಗೆ ಪರಿಣಿತಾ ಮಾಡಿರುವ ಸಾಧನೆ ಅನನ್ಯ’ವಾದುದು.

‘ಪರಿಣಿತಾರ ಕೃತಿ ಸುಬ್ಬು ಪಬ್ಲಿಕೇಷನ್ಸ್‌ ಅಡಿಯಲ್ಲಿ ಮಾರ್ಚ್ 8ರಂದು ಜನಾರ್ಪಣೆಗೊಂಡಿತ್ತು. 

ADVERTISEMENT

‘ನನ್ನ ಪ್ರತಿಭೆ, ಸೃಜನಶೀಲತೆ ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಲೇಖಕಿ, ದಂತ ವೈದ್ಯೆಯಾದ ತಾಯಿ ಡಾ. ಅನುಷಾ ಆರ್. ಗುಪ್ತಾ, ಬೆಸ್ಕಾಂ ಅಧಿಕಾರಿಯಾಗಿರುವ ತಂದೆ ಕೆ. ಬಾಲಾಜಿ ಮತ್ತು ಬಸವನಗುಡಿಯ ಎನ್‌ಇಟಿ ಪಬ್ಲಿಕ್ ಶಾಲೆಯ ಶಿಕ್ಷಕರಿಗೆ ಆಭಾರಿಯಾಗಿದ್ದೇನೆ’ ಎಂದು ಪರಿಣಿತಾ ಹೇಳಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.