ADVERTISEMENT

ಆರ್ಥಿಕ ನೀತಿಗಳ ಬದಲಾವಣೆ ಅಗತ್ಯ: ಎಂ.ವಿ.ನಾಡಕರ್ಣಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 1:43 IST
Last Updated 10 ಅಕ್ಟೋಬರ್ 2021, 1:43 IST
ಕಾರ್ಯಕ್ರಮದಲ್ಲಿ (ಬಲ ತುದಿ) ಪ್ರೊ.ಎಂ.ವಿ.ನಾಡಕರ್ಣಿ ಅವರು ‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಬಿ.ಎಸ್.ಶ್ರೀಕಂಠಾರಾಧ್ಯ, ಪ್ರೊ.ಅಬ್ದುಲ್ ಅಜೀಜ್, ಐಸೆಕ್‌ ಉಸ್ತುವಾರಿ ನಿರ್ದೇಶಕ ಪ್ರೊ.ಡಿ.ರಾಜಶೇಖರ್, ಪ್ರೊ.ಕೃಷ್ಣ ರಾಜ್ ಇದ್ದಾರೆ -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಬಲ ತುದಿ) ಪ್ರೊ.ಎಂ.ವಿ.ನಾಡಕರ್ಣಿ ಅವರು ‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಬಿ.ಎಸ್.ಶ್ರೀಕಂಠಾರಾಧ್ಯ, ಪ್ರೊ.ಅಬ್ದುಲ್ ಅಜೀಜ್, ಐಸೆಕ್‌ ಉಸ್ತುವಾರಿ ನಿರ್ದೇಶಕ ಪ್ರೊ.ಡಿ.ರಾಜಶೇಖರ್, ಪ್ರೊ.ಕೃಷ್ಣ ರಾಜ್ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆರ್ಥಿಕ ಪ್ರಗತಿಗೆ ಕಾಲಕ್ಕೆ ಅನುಗುಣವಾಗಿ ಆರ್ಥಿಕ ನೀತಿಗಳನ್ನುಪರಿಷ್ಕರಿಸುವುದು ಅವಶ್ಯಕ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್‌) ಸಂದರ್ಶಕ ಪ್ರಾಧ್ಯಾಪಕ ಎಂ.ವಿ.ನಾಡಕರ್ಣಿ ಹೇಳಿದರು.

ಐಸೆಕ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಎಸ್.ಶ್ರೀಕಂಠಾರಾಧ್ಯ ಅವರಿಗೆ ಅಭಿನಂದನೆ ಹಾಗೂ ‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ (ಭಾರತದಲ್ಲಿ ಸಾರ್ವಜನಿಕ ನೀತಿಗಳು) ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕದಲ್ಲಿ ಪ್ರಸ್ತುತ ಆರ್ಥಿಕ ಪದ್ಧತಿಯ ಬದಲಾವಣೆಗಳಿಗೆ ಪೂರಕವಾದ ನೀತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದರು.

ADVERTISEMENT

ಐಸೆಕ್‌ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅಬ್ದುಲ್ ಅಜೀಜ್‌,‘ಆರ್ಥಿಕ ನೀತಿಗಳ ನಿರೂಪಣೆ ಕುರಿತ ಈ ಪುಸ್ತಕ ಹೆಚ್ಚು ಪ್ರಸ್ತುತತೆಯಿಂದ ಕೂಡಿದೆ’ ಎಂದು ಹೇಳಿದರು.

ಐಸೆಕ್‌ ವತಿಯಿಂದ ಸನ್ಮಾನಿತರಾದ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಶ್ರೀಕಂಠಾರಾಧ್ಯ ಅವರು, ಸಂಸ್ಥೆ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ ಪುಸ್ತಕವನ್ನುಐಸೆಕ್‌ ಸಂಸ್ಥೆಯ ಪ್ರೊ.ಕೃಷ್ಣ ರಾಜ್ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.