ADVERTISEMENT

ನಿಷೇಧಾಜ್ಞೆ; ಲಾಠಿ ಬಿಟ್ಟು ಕೆಲಸ ಮಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 4:46 IST
Last Updated 28 ಮಾರ್ಚ್ 2020, 4:46 IST
ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು
ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು   

ಬೆಂಗಳೂರು: ನಗರದಲ್ಲಿ ನಿಷೇಧಾಜ್ಞೆ ನಡುವೆಯೇ ಪೊಲೀಸರು ಸಿಕ್ಕ ಸಿಕ್ಕವರ ಮೇಲೆಲಾಠಿಬೀಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆಲಾಠಿಬಿಟ್ಟುಕೆಲಸಮಾಡುವಂತೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪೊಲೀಸರಿಗೆ ಶುಕ್ರವಾರಸೂಚನೆನೀಡಿದ್ದಾರೆ.

ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಬೆಂಗಳೂರ ಸಹ ಸ್ತಬ್ಧವಾಗಿದೆ. ಅಗತ್ಯ ವಸ್ತು ಖರೀದಿಸಲು ಹಾಗೂ ವೈದ್ಯಕೀಯ ಸೇರಿ ಅಗತ್ಯ ಸೇವೆ ಪಡೆಯಲು ಹೋಗುವರ ಮೇಲೂ ಹಲವೆಡೆ ಪೊಲೀಸರುಲಾಠಿಬೀಸಿದ್ದಾರೆ.

ಈ ಬಗ್ಗೆ ಹಲವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಜಕೀಯ ಮುಖಂಡರೂ ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಭಾಸ್ಕರ್ ರಾವ್, ‘ಎಲ್ಲ ಪೊಲೀಸರುಲಾಠಿಬಿಟ್ಟುಕೆಲಸಮಾಡಬೇಕು. ರಸ್ತೆಯಲ್ಲಿ ಯಾರೇ ಬಂದರೂ ಸೌಜನ್ಯದಿಂದ ಮಾತನಾಡಿಸಬೇಕು. ಅವರ ಉದ್ದೇಶವನ್ನುತಿಳಿದುಕೊಂಡು ಮುಂದುವರಿಯಬೇಕು’ ಎಂದು ಖಡಕ್ಸೂಚನೆನೀಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಲಾಠಿಯನ್ನು ಠಾಣೆಯಲ್ಲೇಬಿಟ್ಟುಸಮವಸ್ತ್ರದಲ್ಲಿ ಕರ್ತವ್ಯದ ಸ್ಥಳಕ್ಕೆ ಬರಬೇಕು’ ಎಂದಿದ್ದಾರೆ.

ಸಂಚಾರ ಪೊಲೀಸರುಲಾಠಿಹಿಡಿಯಬಾರದು: ‘ಸಂಚಾರ ಪೊಲೀಸರೂಲಾಠಿಹಿಡಿದುಕೆಲಸಮಾಡುತ್ತಿರುವುದು ಕಂಡಿದೆ. ಇನ್ನು ಮುಂದೆ ಸಂಚಾರ ಪೊಲೀಸರುಲಾಠಿಹಿಡಿಯಬಾರದು’ ಎಂದು ಕಮಿಷನರ್ ಹೇಳಿದ್ದಾರೆ.

‘ನಗರ ಸಶಸ್ತ್ರ ಮೀಸಲು ಪಡೆ ಹಾಗೂ ರಾಜ್ಯ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ಮಾತ್ರಲಾಠಿಬಳಸಬಹುದು’ ಎಂದಿದ್ದಾರೆ.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ‘ಹಗಲು- ರಾತ್ರಿ ಎನ್ನದೇ ಕರ್ತವ್ಯದಲ್ಲಿರುವ ಎಲ್ಲ ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಕಮಿಷನರ್ ಸಲಹೆ ನೀಡಿದ್ದಾರೆ.

‘ಪೊಲೀಸರು ಮಾಸ್ಕ್ ಹಾಕಿಕೊಳ್ಳಬೇಕು. ಆಗಾಗ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು. ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದಿದ್ದಾರೆ.

ಬಿಕೋ ಎನ್ನುತ್ತಿರುವ ರಸ್ತೆಗಳು: ನಿಷೇಧಾಜ್ಞೆಯಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್, ಎಂ.ಜಿ.ರಸ್ತೆ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ಶಾಂತಿನಗರ, ಕೋರಮಂಗಲ ಹಾಗೂ ಸುತ್ತಮುತ್ತಲ ಪ್ರಮುಖ ರಸ್ತೆಗಳು ವಾಹನ ಹಾಗೂ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿವೆ.

ದಿನದ 24 ಗಂಟೆಯೂ ವಾಹನಗಳ ದಟ್ಟಣೆ ಹಾಗೂ ಜನಸಂದಣಿ ಇರುತ್ತಿದ್ದ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣವೂ ಬಿಕೋ ಎನ್ನುತ್ತಿತ್ತು. ಆಶ್ರಯ ಇಲ್ಲದ ನಿರ್ಗತಿಕರು ಬಿಟ್ಟರೆ ಬೇರೆ ಯಾರೊಬ್ಬರೂ ಈ ನಿಲ್ದಾಣಗಳಲ್ಲಿ ಇರಲಿಲ್ಲ. ಪೊಲೀಸರು ಹಾಗೂ ಕೆಲ ಸಂಘಟನೆಗಳ ಸದಸ್ಯರೇ ನಿಲ್ದಾಣಕ್ಕೆ ಬಂದು ನಿರ್ಗತಿಕರಿಗೆ ಊಟ ಹಾಗೂ ಟೀ ಕೊಟ್ಟು ಹೋದರು.

ಡಿಜಿಪಿ ಪ್ರವೀಣ್ ಸೂದ್ ಸಭೆ: ನಿಷೇಧಾಜ್ಞೆ ಭದ್ರತೆ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಅವರು ಶುಕ್ರವಾರದ ನಗರದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಕಮಿಷನರ್ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.