ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನ: ಬಿಐಸಿಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 1:55 IST
Last Updated 7 ಮಾರ್ಚ್ 2020, 1:55 IST
ಎಂ.ಡಿ.ಪಲ್ಲವಿ
ಎಂ.ಡಿ.ಪಲ್ಲವಿ   

ಬೆಂಗಳೂರು:ಮಹಿಳೆ,ಸ್ವಾತಂತ್ರ್ಯ, ಸಮಾನತೆ ವಿಷಯಗಳ ನೆಲೆಯಲ್ಲಿ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ಸಜ್ಜಾಗಿದೆ.

ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯದ ಅದೇ ಹಳೇ ರಾಗ, ಹಳೇ ಹಾಡುಗಳ ಬದಲಿಗೆ, ಮಹಿಳಾ ಸಾಮರ್ಥ್ಯದ ಹೊಸ ಹೊಳಹುಗಳನ್ನು ಒಳಗೊಂಡ ಈ ಕಾರ್ಯಕ್ರಮವು ಮಾರ್ಚ್‌8ರ (ಭಾನುವಾರ) ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ.

12ನೇ ಶತಮಾನದ ಮಹಿಳಾ ವಚನಗಾರ್ತಿಯರ ವಚನಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ‘ಪುರುಷನೂ ಅಳುತ್ತಾನೆ’, ‘20ನೇ ಶತಮಾನದಲ್ಲಿ ಭಾರತದ ಮುಸ್ಲಿಂ ಮಹಿಳೆಯರು’, ‘ನಮ್ಮ ನಡೆ ಸಮಾನತೆ ಕಡೆಗೆ’ ವಿಷಯ ಕುರಿತಂತೆ ತಜ್ಞರು ಚರ್ಚೆ ನಡೆಸಲಿದ್ದಾರೆ.

ADVERTISEMENT

‘ಪುರುಷತ್ವ ವಿಷಯವೇ ಬಿಕ್ಕಟ್ಟಿನಲ್ಲಿದೆಯೇ’ ಕುರಿತ ಸಾಕ್ಷ್ಯಚಿತ್ರವಲ್ಲದೆ, ಮಹಿಳೆಯರ ಕುರಿತ ವಿಭಿನ್ನ ಕಥಾಹಂದರವುಳ್ಳ ವಿವಿಧ ಚಲನಚಿತ್ರ ಗಳ ಪ್ರದರ್ಶನವೂ ಇದೆ. ಕಾವ್ಯವಾಚನ ಮತ್ತು ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.