ADVERTISEMENT

ಐಆರ್‌ಸಿಟಿಸಿ | ದೇಶಿಯ, ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 14:11 IST
Last Updated 28 ಜುಲೈ 2025, 14:11 IST
   

ಬೆಂಗಳೂರು: ರೈಲ್ವೆ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಯಾದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

ಲಡಾಖ್‌ಗೆ 7 ದಿನಗಳ ಪ್ರವಾಸ ಆ.13ಕ್ಕೆ ಆರಂಭವಾಗಲಿದೆ. ಲೇಹ್, ಶಾಮ್ ವ್ಯಾಲಿ , ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗಳನ್ನು ಒಳಗೊಂಡ ಈ ಪ್ರವಾಸಕ್ಕೆ ಒಬ್ಬರಿಗೆ ₹57,950 ದರ ಇರಲಿದೆ. ಮಧ್ಯಪ್ರದೇಶದ ಜ್ಯೋತಿರ್ಲಿಂಗಗಳು 4 ದಿನಗಳ ಪ್ರವಾಸ ಆ.21ಕ್ಕೆ ಆರಂಭವಾಗಲಿದ್ದು, ಓಂಕಾರೇಶ್ವರ, ಮಹಾಕಾಲೇಶ್ವರ ಮತ್ತು ಇಂದೋರ್‌ಗಳಿಗೆ ಭೇಟಿ ಇರಲಿದೆ. ₹ 24,600 ಪ್ರವಾಸ ದರ ನಿಗದಿಯಾಗಿದೆ.

ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ 6 ದಿನಗಳ ಪ್ರವಾಸ ಆ.29ಕ್ಕೆ ಆರಂಭಗೊಳ್ಳಲಿದ್ದು, ₹ 34,200 ದರ ಇರಲಿದೆ. ಸೆಪ್ಟೆಂಬರ್‌ 3ಕ್ಕೆ ಆರಂಭವಾಗುವ 13 ದಿನಗಳ ಚಾರ್ ಧಾಮ್ ಯಾತ್ರೆಯಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದ್ರಿನಾಥ, ದೇವಪ್ರಯಾಗ ಮತ್ತು ರಿಷಿಕೇಶಕ್ಕೆ ಭೇಟಿ ಇರಲಿದ್ದು, ₹60,950 ದರ ನಿಗದಿ ಮಾಡಲಾಗಿದೆ.

ADVERTISEMENT

ಈ ಪ್ರವಾಸಗಳು ವಿಮಾನ ಟಿಕೆಟ್‌, ವಸತಿ, ಅಗತ್ಯ ಇರುವಲ್ಲಿ ವಾಹನ, ಅಲ್ಲದೇ ಆಹಾರ, ಪ್ರಯಾಣ ವಿಮೆ ಮತ್ತು ಅನ್ವಯವಾಗುವ ತೆರಿಗೆಗಳು ಒಳಗೊಂಡಿವೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ಯಾಕೇಜ್‌ಗಳು ಕೂಡ ಆರಂಭಗೊಳ್ಳಲಿದೆ. ಅಕ್ಟೋಬರ್‌ 29ರಿಂದ 9 ದಿನಗಳ ದಕ್ಷಿಣ ಕೊರಿಯಾ ಪ್ರವಾಸ (₹2,68,900), ನವೆಂಬರ್‌ 6ರಿಂದ 6 ದಿನ ಭೂತಾನ್ ಪ್ರವಾಸ (₹83,500), ನವೆಂಬರ್‌ 17ರಿಂದ 5 ದಿನ ದುಬೈ-ಅಬುಧಾಬಿ ಪ್ರವಾಸ (₹ 93,750) ಇರಲಿದೆ.

ಮಾಹಿತಿ ಮತ್ತು ಬುಕಿಂಗ್‌ಗಾಗಿ www.irctctourism.com ಗೆ ಭೇಟಿ ನೀಡಬಹುದು. ಇಲ್ಲವೇ ಮೊಬೈಲ್‌: 8595931294 /94 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.