ಬೆಂಗಳೂರು: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತು ‘ಸಮುದಾಯ ಕರ್ನಾಟಕ’ ಮತ್ತು ‘ಯೂತ್ ಫಾರ್ ನೇಷನ್’ ವತಿಯಿಂದ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಸಹಯೋಗದಲ್ಲಿ ಇದೇ 18ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
1919ರಲ್ಲಿ ನಡೆದಿದ್ದ ಘಟನೆಗೆ ಏಪ್ರಿಲ್ 13ರಂದು ನೂರು ವರ್ಷ ತುಂಬಿದೆ. ಇದನ್ನು ನೆನಪಿಸುವ ಸಲುವಾಗಿ ಕಿರುನಾಟಕ, ಕಿರುಚಿತ್ರ ಪ್ರದರ್ಶನ, ವಿದ್ಯಾರ್ಥಿಗಳ ಜತೆ ಸಂವಾದ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಸಿನಿಮಾ ನಿರ್ದೇಶಕಬಿ. ಸುರೇಶ್ ಉದ್ಘಾಟಿಸಲಿದ್ದಾರೆ. ನ್ಯಾಷನಲ್ ಎಜುಕೇಷನ್ ಸೊಸೈಟಿಕಾರ್ಯದರ್ಶಿಪ್ರೊ.ಎಸ್.ಎನ್. ನಾಗರಾಜರೆಡ್ಡಿ,ಸಮುದಾಯ ಕರ್ನಾಟಕಸಹ ಕಾರ್ಯದರ್ಶಿವಿಮಲಾ.ಕೆ.ಎಸ್,ನವೀನ್ ಸಾಣೆಹಳ್ಳಿ, ಪ್ರೊ.ಎ.ಎಚ್. ರಾಮರಾವ್ ಭಾಗವಹಿಸಲಿದ್ದಾರೆ. ಸ್ಥಳ–ಎಚ್.ನರಸಿಂಹಯ್ಯ ಮಲ್ಟಿ ಮೀಡಿಯಾ ಸಭಾಂಗಣ,ನ್ಯಾಷನಲ್ ಕಾಲೇಜು,ಬಸವನಗುಡಿ.ಸಮಯ–ಮಧ್ಯಾಹ್ನ 2.30.
ವಿವರಗಳಿಗಾಗಿ:9448072431
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.