ADVERTISEMENT

ಜನಸೇವಾ ವಿದ್ಯಾಕೇಂದ್ರ:ಡಿ.26ಕ್ಕೆ ‘ಪೂರ್ಣ ಮಂಡಲೋತ್ಸವ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:36 IST
Last Updated 3 ಡಿಸೆಂಬರ್ 2021, 16:36 IST

ಬೆಂಗಳೂರು: ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಸುವರ್ಣ ಮಹೋತ್ಸವದ ಅಂಗವಾಗಿಜನಸೇವಾ ವಿಶ್ವಸ್ಥ ಮಂಡಳಿಯುಇದೇ 26ರಂದು ‘ಪೂರ್ಣ ಮಂಡಲೋತ್ಸವ’ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ನಿರ್ವಾಹಕವಿಶ್ವಸ್ಥ ನಾ.ತಿಪ್ಪೇಸ್ವಾಮಿ,‘ಡಿ.26ರ ಬೆಳಿಗ್ಗೆ 9.30ಕ್ಕೆ ಪೂರ್ಣ ಮಂಡಲೋತ್ಸವವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಉದ್ಘಾಟಿಸಲಿದ್ದಾರೆ. ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಕೆ.ಇ.ದೇವನಾಥನ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದಾರೆ’ ಎಂದರು.

‘ಸಂಜೆ 4.30ಕ್ಕೆ ನಡೆಯಲಿರುವ ಜನಸೇವಾ ವಿದ್ಯಾಕೇಂದ್ರದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಬ್ಯಾಂಡ್‌ ಸಹಿತ ದೈಹಿಕ ಕಸರತ್ತು ಪ್ರದರ್ಶಿಸಲಿದ್ದಾರೆ. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಂ ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಭಾಗವಹಿಸಲಿದ್ದಾರೆ’ ಎಂದೂ ಹೇಳಿದರು.

ADVERTISEMENT

‘ಪೂರ್ಣ ಮಂಡಲೋತ್ಸವದ ನಿಮಿತ್ತ ವರ್ಷವಿಡೀ 50 ಗ್ರಾಮಗಳಲ್ಲಿ ವಿದ್ಯಾರ್ಥಿ ಸಮಾವೇಶ, ಗುರುಕುಲ️ದ ರಾಷ್ಟ್ರೀಯ ಸಮ್ಮೇಳನ, ಯುವ ಸಮಾವೇಶ, ಪ್ರಕೃತಿ ಚಿಕಿತ್ಸಾ ಕೇಂದ್ರಗಳು, ಗೋ ಶಾಲೆಗಳ ಸ್ಥಾಪನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,‘ಅರಮನೆ ಹಾಗೂ ಜನಸೇವಾ ವಿಶ್ವಸ್ಥ ಮಂಡಳಿಯ ಚಿಂತನೆಗಳು ಸಂಪೂರ್ಣವಾಗಿ ಹೋಲಿಕೆಯಾಗುತ್ತವೆ. ಆ ಕಾರಣಕ್ಕೆ ನಾನೂ ಮಂಡಲೋತ್ಸವದ ಭಾಗವಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.