ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆ ಯಲ್ಲಿಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೊರರೋಗಿ ವಿಭಾಗವನ್ನು (ಒಪಿಡಿ) ಜುಲೈ 4ರವರೆಗೆ ಬಂದ್ ಮಾಡಲಾಗಿದೆ. ರೋಗಿಗಳಿಗೆ ತುರ್ತು ಚಿಕಿತ್ಸೆಗಳು ಲಭ್ಯ ಇರಲಿವೆ.
ಜೂನ್ 24ರಂದು ಒಬ್ಬ ವೈದ್ಯ, ದತ್ತಾಂಶ ನಿರ್ವಾಹಕ ಹಾಗೂ ತಂತ್ರಜ್ಞ ಕೊರೊನಾ ಸೋಂಕಿತರಾದ ಬೆನ್ನಲ್ಲಿಯೇ ಸಂಸ್ಥೆಯ ಒಪಿಡಿ ಹಾಗೂ ಕ್ಯಾಥ್ ಲ್ಯಾಬ್ ಮುಚ್ಚಲಾಗಿದೆ. ಅಲ್ಲಿ ಈವರೆಗೆ ಮೂವರು ವೈದ್ಯರು ಸೇರಿದಂತೆ 16 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಹಾಗಾಗಿ ಅಲ್ಲಿನ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅವರ ವರದಿ ಇನ್ನೂ ಬಂದಿಲ್ಲ. ಹೀಗಾಗಿ ಒಪಿಡಿ ಬಂದ್ ವಿಸ್ತರಿಸಲಾಗಿದೆ. ಸಂಸ್ಥೆಗೆ ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಸರಾಸರಿ ಒಂದು ಸಾವಿರ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು.
‘ಸೋಂಕು ನಿವಾರಕದಿಂದ ಸಂಸ್ಥೆಯ ಕಟ್ಟಡವನ್ನು ಸ್ವಚ್ಛಪಡಿಸ ಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ವರದಿ ಬರಲು ಸಮಯಾವಕಾಶ ಬೇಕು. ಹಾಗಾಗಿ ಒಪಿಡಿ ಮುಚ್ಚಲಾಗಿದೆ. ಟೆಲಿ ಮೆಡಿ ಸಿನ್ ಸೇವೆ ಲಭ್ಯವಿರಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಟೆಲಿ ಮೆಡಿಸಿನ್ ಸೇವೆಗೆ:080 22977400, 267, 433
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.