ಪ
ಬೆಂಗಳೂರು: ಪ್ರತಿಷ್ಠಿತ ಮತ್ತು ಅತ್ಯಂತ ಹಳೆಯ ಆಭರಣ ಪ್ರದರ್ಶನ ಮೇಳ 'ಜ್ಯುವೆಲ್ಸ್ ಆಫ್ ಇಂಡಿಯಾ‘ಕ್ಕೆ ಶುಕ್ರವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಮದುವೆ ಸಮಾರಂಭ ಮತ್ತು ಅಕ್ಷಯ ತೃತೀಯದ ಪ್ರಯುಕ್ತ ಆಯೋಜಿಸಿರುವ ಮೇಳ ಏಪ್ರಿಲ್ 13ರವರೆಗೆ ನಡೆಯಲಿದೆ. ದೇಶದ 40 ಅತ್ಯುತ್ತಮ ಆಭರಣ ತಯಾರಕರು ಭಾಗವಹಿಸಿದ್ದು, ಗ್ರಾಹಕರ ಇಚ್ಛೆಗೆ ಪೂರಕವಾದ ಹಾಗೂ ಉತ್ತಮ ಶ್ರೇಣಿಯ ಆಭರಣಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಜ್ಯುವೆಲ್ಸ್ ಆಫ್ ಇಂಡಿಯಾ ವ್ಯವಸ್ಥಾಪಕ ವಿಕ್ರಮ್ ಮೆಹ್ತಾ ಮಾತನಾಡಿ, ‘ದೇಶದ ಅತ್ಯುತ್ತಮ ಆಭರಣ ವ್ಯಾಪಾರಿಗಳು ವಿಶೇಷ ಸಂಗ್ರಹಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.