ADVERTISEMENT

ಹಿರಿಯ ಪತ್ರಕರ್ತ ಪಿ. ಲಂಕೇಶ್‌ ಜನ್ಮದಿನ: ‘ದೊರೆ ಈಡಿಪಸ್‌’ ಪ್ರದರ್ಶನ 8ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:25 IST
Last Updated 4 ಮಾರ್ಚ್ 2021, 4:25 IST

ಬೆಂಗಳೂರು: ಹಿರಿಯ ಪತ್ರಕರ್ತ ಪಿ. ಲಂಕೇಶ್‌ 85ನೇ ಜನ್ಮದಿನದ ಅಂಗವಾಗಿ ಇದೇ 8ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ದೊರೆ ಈಡಿಪಸ್‌’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಲಂಕೇಶ್ ಬರೆದಿರುವ ಈ ನಾಟಕವನ್ನು ಶಶಿಧರ್ ಭಾರಿಘಾಟ್‌ ನಿರ್ದೇಶಿಸಿದ್ದಾರೆ. ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್. ಶಂಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತ ಯಾತ್ರಾ ಕೇಂದ್ರ, ಪ್ರಯೋಗ ರಂಗ ಸಂಸ್ಥೆಗಳು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್‌ ಅವರಿಗೆ ಲಂಕೇಶ್‌ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ADVERTISEMENT

ಎನ್.ಆರ್. ವಿಶುಕುಮಾರ್‌, ಎಂ.ಕೆ. ಭಾಸ್ಕರ್ ರಾವ್, ಕವಿತಾ ಲಂಕೇಶ್ ಹಾಗೂ ಇಂದಿರಮ್ಮ ಲಂಕೇಶ್‌ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.