ಬೆಂಗಳೂರು: ಜೋಯಾಲುಕ್ಕಾಸ್ ಫೌಂಡೇಷನ್ ರಾಜ್ಯದ 50 ಸೌಲಭ್ಯ ವಂಚಿತ ಬಡ ಕುಟುಂಬಗಳಿಗೆ ‘ಜಾಯ್ ಹೋಮ್ಸ್’ ಶೀರ್ಷಿಕೆಯಡಿ ಮನೆಗಳನ್ನು ಒದಗಿಸಲು ಮುಂದಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವನ್ನು ಇದೇ 31ರಂದು ಬೆಳಿಗ್ಗೆ 11 ಗಂಟೆಗೆ ಹೊಸೂರು ಮುಖ್ಯ ರಸ್ತೆಯಲ್ಲಿರುವ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೃಹ ಸಚಿವ ಜಿ. ಪರಮೇಶ್ವರ ಭಾಗವಹಿಸಲಿದ್ದು, 50 ಕುಟುಂಬಗಳಿಗೆ ಮನೆಯ ಕೀಗಳನ್ನು ಹಸ್ತಾಂತರಿಸಲಾಗುತ್ತದೆ. ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಆಲುಕ್ಕಾಸ್ ಉಪಸ್ಥಿತರಿರುತ್ತಾರೆ.
‘ಸಂಸ್ಥೆಯ ‘ಜಾಯ್ ಹೋಮ್ಸ್’ ಯೋಜನೆಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್‌ಆರ್) ಭಾಗವಾಗಿದೆ. ಶಾಶ್ವತ ಮತ್ತು ಸುಂದರ ವಸತಿಗಳನ್ನು ಒದಗಿಸುವುದು ಯೋಜನೆಯ ಉದ್ದೇಶ’ ಎಂದು ಜೋಯಾಲುಕ್ಕಾಸ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.