ADVERTISEMENT

ಮದ್ದಳೆ ಕಲಾವಿದ ಶಂಕರ ಭಾಗವತ ಯಲ್ಲಾಪುರಗೆ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಇಂದು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 21:30 IST
Last Updated 30 ಅಕ್ಟೋಬರ್ 2021, 21:30 IST
ಶಂಕರ ಭಾಗವತ ಯಲ್ಲಾಪುರ
ಶಂಕರ ಭಾಗವತ ಯಲ್ಲಾಪುರ   

ಬೆಂಗಳೂರು: ಕಲಾ ಕದಂಬ ಆರ್ಟ್‌ ಸೆಂಟರ್ ಭಾನುವಾರ ಸಂಜೆ 4 ಗಂಟೆಗೆ ಚಾಮರಾಜಪೇಟೆಯ ಉದಯಭಾನು ಕಲಾಸಂಘದಲ್ಲಿ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ಈ ಪ್ರಶಸ್ತಿಗೆಮದ್ದಳೆ ಕಲಾವಿದ ಶಂಕರ ಭಾಗವತ ಯಲ್ಲಾಪುರ ಆಯ್ಕೆಯಾಗಿದ್ದು, ಪ್ರಶಸ್ತಿಯು₹ 10 ಸಾವಿರ ನಗದು ಹಾಗೂ ಬೆಳ್ಳಿತಟ್ಟೆ ಒಳಗೊಂಡಿದೆ.

ಸಂಗೀತ ವಿದ್ವಾಂಸ ವಿದ್ಯಾಭೂಷಣ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ, ಯಕ್ಷಗಾನ ಸಂಶೋಧಕ ಆನಂದರಾಮ ಉಪಾಧ್ಯ, ಯಕ್ಷಗಾನ ಪೋಷಕ ಎ. ಪದ್ಮನಾಭ ಕಾರಂತ, ಯುವ ವಿಪ್ರ ವೇದಿಕೆಯ ಸಂಸ್ಥಾಪನಾಧ್ಯಕ್ಷ ಕೃಷ್ಣಮೂರ್ತಿ ಅಡಿಗ, ಕಾಳಿಂಗ ನಾವಡ ಅವರ ಸಹೋದರಿ ಸುಶೀಲ ಉರಾಳ ಹಾಗೂ ಕರಬ ಪ್ರತಿಷ್ಠಾನದ ದೇವರಾಜ ಕರಬಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಲಾ ಕದಂಬ ಆರ್ಟ್ ಸೆಂಟರ್‌ನ ಅಧ್ಯಕ್ಷ ಅಂಬರೀಷ್ ಭಟ್ ಹಾಗೂ ನಿರ್ದೇಶಕರಾಧಾಕೃಷ್ಣ ಉರಾಳ ಉಪಸ್ಥಿತರಿರಲಿದ್ದಾರೆ.

ADVERTISEMENT

ಕಲಾ ಕದಂಬ ಆರ್ಟ್ ಸೆಂಟರ್‌ನ ಕಲಾವಿದರು ಅಂಬೇಮೂಲೆ ಗೋವಿಂದ ಭಟ್ ರಚಿಸಿದ ‘ಶ್ರೀ ಕೃಷ್ಣ ತುಲಾಭಾರ’ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.