ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್’ ಮಳಿಗೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಕಾಂಚೀಪುರಂ, ಧರ್ಮಾವರಂ ಸೇರಿದಂತೆ ಗುಣಮಟ್ಟದ ಬ್ರಾಂಡೆಡ್ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.
ಮಳಿಗೆಯಲ್ಲಿ ಸೀರೆಗಳ ಪ್ರದರ್ಶನದ ಜೊತೆಗೆ, ವಿಶೇಷ ಕೊಡುಗೆಗಳೂ ಇವೆ. ಹಬ್ಬದ ಸಂದರ್ಭದಲ್ಲಿ ರೇಷ್ಮೆ ಸೀರೆಗಳು ನೇಕಾರರ ಬೆಲೆಯಲ್ಲೇ ಗ್ರಾಹಕರಿಗೆ ಲಭ್ಯವಿವೆ.
ಗುಣಮಟ್ಟಕ್ಕೆ ಕಾಂಚೀಪುರಂ ರೇಷ್ಮೆ ಸೀರೆಗಳು ಪ್ರಸಿದ್ಧಿ ಪಡೆದಿದ್ದು, ನೇಕಾರರು ಕೈಯಿಂದ ನೇಯ್ದ ಸೀರೆಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಮಳಿಗೆಯಲ್ಲಿ, ಕಾಂಚೀಪುರಂ, ಅರಣಿ, ಧರ್ಮಾವರಂ ಮತ್ತು ಹಗುರವಾದ ಕಾಂಚೀಪುರಂ ಸೀರೆಗಳಿವೆ. ವಿವಿಧ ವಿನ್ಯಾಸಗಳು, ಬಣ್ಣಗಳು ಮತ್ತು ಮಾದರಿಗಳ ಸೀರೆಗಳೂ ಲಭ್ಯವಿವೆ.
ದೇಶದ ವಿವಿಧೆಡೆ ಇರುವ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಒಂದೇ ಸೂರಿನಡಿ ವೈವಿಧ್ಯಮಯ ರೇಷ್ಮೆ ಸೀರೆಗಳು ಲಭ್ಯವಿವೆ. ಈ ಬಾರಿ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್‌ನೊಂದಿಗೆ ಯುಗಾದಿಯನ್ನು ಆಚರಿಸಿಕೊಳ್ಳಬಹುದು. ತಕ್ಷಣವೇ ನಮ್ಮ ಮಳಿಗೆಗೆ ಭೇಟಿ ನೀಡಿದರೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸೌಂದರ್ಯ ಸಾರುವ ರೇಷ್ಮೆ ಸೀರೆಗಳ ವೈಭವ ಕಣ್ತುಂಬಿಕೊಳ್ಳಬಹುದು. ಅಲ್ಲದೇ ತಮ್ಮಷ್ಟಿದ ಸೀರೆಗಳನ್ನು ಖರೀದಿಸಿ ಹಬ್ಬದಲ್ಲಿ ಸಂಭ್ರಮಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.