ADVERTISEMENT

ವ್ಯಾಟಿಕನ್‌ ನ್ಯೂಸ್‌ ವೆಬ್‌ ಪೋರ್ಟಲ್‌ನಲ್ಲಿ 53ನೇ ಭಾಷೆಯಾಗಿ ಕನ್ನಡ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 16:22 IST
Last Updated 2 ಏಪ್ರಿಲ್ 2024, 16:22 IST
   

ಬೆಂಗಳೂರು: ವ್ಯಾಟಿಕನ್‌ ನ್ಯೂಸ್‌ ವೆಬ್‌ ಪೋರ್ಟಲ್‌ನಲ್ಲಿ 53ನೇ ಭಾಷೆಯಾಗಿ ಕನ್ನಡ ಸೇರ್ಪಡೆಯಾಗಿದೆ. 

ಈ ವೆಬ್‌ ಪೋರ್ಟಲ್‌ ವ್ಯಾಟಿಕನ್ ಸಿಟಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಕ್ರೈಸ್ತರ ಧರ್ಮ ಗುರು ಪೋಪ್ ಪ್ರಾನ್ಸಿಸ್ ಅವರ ಕಾರ್ಯಚಟುವಟಿಕೆ ಹಾಗೂ ಸಂದೇಶಗಳು, ಕ್ಯಾಥೋಲಿಕ್ ಚರ್ಚ್ ಕಾರ್ಯಕ್ರಮಗಳು ಹಾಗೂ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಈ ವೆಬ್‌ಸೈಟ್ ಪ್ರಕಟಿಸಲಿದೆ. ವಿಶ್ವದ ವಿವಿಧ ಭಾಷೆಗಳಲ್ಲಿ ಈ ವೆಬ್‌ಸೈಟ್‌ ಮೂಲಕ ಮಾಹಿತಿ ಒದಗಿಸಲಾಗುತ್ತಿದೆ. ಭಾರತೀಯ ಭಾಷೆಗಳಾದ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಈಗ ಆ ಸಾಲಿಗೆ ಕನ್ನಡ ಸೇರಿದೆ. 

‘ವ್ಯಾಟಿಕನ್ ಸುದ್ದಿ ತಾಣ ಕನ್ನಡ ಭಾಷೆಗೂ ಮಂಗಳವಾರದಿಂದ ತೆರೆದುಕೊಂಡಿದೆ. ವ್ಯಾಟಿಕನ್ ನ್ಯೂಸ್‌ ವೆಬ್‌ ಪೋರ್ಟಲ್‌ನಲ್ಲಿ ಸುದ್ದಿಗಳು ಕನ್ನಡದಲ್ಲಿ ದೊರೆಯುತ್ತಿರುವುದು ಅತೀವ ಸಂತಸ ತಂದಿದೆ’ ಎಂದು ಬೆಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ (ಆರ್ಚ್‌ ಬಿಷಪ್‌) ಪೀಟರ್ ಮಚಾದೊ ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.