ADVERTISEMENT

karnataka Budget | ಬಜೆಟ್ ನಿರೀಕ್ಷೆ: ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ..

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
<div class="paragraphs"><p>ರಾಜ್ಯ ಬಜೆಟ್‌ </p></div>

ರಾಜ್ಯ ಬಜೆಟ್‌

   

‘ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ’... 

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅಭಾವ ಅಧಿಕವಾಗಿದೆ. ಶೌಚಾಲಯಗಳಿದ್ದರೂ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಉಪಯೋಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಶೌಚಾಲಯಗಳನ್ನು ನಿರ್ವಹಣೆ ಮಾಡುವವರಿಗೆ ಗೌರವ ಧನ ನಿಗದಿಪಡಿಸಬೇಕು. ಬಜೆಟ್‌ನಲ್ಲಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು. 

ಸಂಜೀವಿನಿ, ಚಾಮರಾಜಪೇಟೆ

ADVERTISEMENT

ಕಾಮಗಾರಿಗಳು ವೇಗಪಡೆಯಲಿ...

ಬೆಂಗಳೂರು ನಗರದ ನಾನಾ ಭಾಗಗಳಲ್ಲಿ ಕೈಗೊಂಡಿರುವ ರಸ್ತೆ, ಮೇಲ್ಸೇತುವೆ, ಒಳಚರಂಡಿ ಸೇರಿದಂತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ. ಇದರಿಂದ ನಿತ್ಯ ಸಂಚಾರ ದಟ್ಟಣೆ, ಆಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಿಶ್ವದಲ್ಲಿಯೇ ಬೆಂಗಳೂರು ಎರಡನೇ ಅತಿಹೆಚ್ಚು ದಟ್ಟಣೆ ಆಗುವ ನಗರ ಎಂಬ ಹೆಸರು ಪಡೆದಿದೆ. ಆದ್ದರಿಂದ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. 

ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ

‘ಶಿಕ್ಷಣಕ್ಕೆ ಆದ್ಯತೆ ನೀಡಿ’ 

ಮುಂಬರುವ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಗರದ ಎಲ್ಲ ರಸ್ತೆ, ಪಾದಚಾರಿ ಮಾರ್ಗಗಳು, ಉದ್ಯಾನಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು. 

ಶಿಲ್ಪಾ ಗೋವಿಂದು, ಮಾದಾವರ

ಮಲ್ಲೇಶ್

‘ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ’ 

ನಗರದ ವಾಹನ ದಟ್ಟಣೆಗೆ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕ ಶೌಚಾಲಯ, ಉದ್ಯಾನ, ಕ್ರೀಡಾಂಗಣಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದ ಮೌಲ್ಯವನ್ನು ಹೆಚ್ಚಿಸುವ ಮತ್ತು ಮಕ್ಕಳಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕಲಿಕಾ ವಿಧಾನವನ್ನು ನಿರ್ಮಿಸಬೇಕು. ಏಕೆಂದರೆ ಇಂದಿನ ಮಕ್ಕಳೇ ನಾಳಿನ ಭವಿಷ್ಯದ ಬುನಾದಿ. ಆದ್ದರಿಂದ ಮೊದಲು ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ರೂಪಿಸಬೇಕು.

ಮಲ್ಲೇಶ್, ಮಲ್ಲೇಶ್ವರ

‘ಮೆಟ್ರೊ ಕಾಮಗಾರಿಗಳಿಗೆ ವೇಗ ನೀಡಿ’ 

ಬೆಂಗಳೂರು ನಗರದ ನಮ್ಮ ಮೆಟ್ರೊದ ನೂತನ ಮಾರ್ಗಗಳನ್ನು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಮಾರ್ಗಗಳ ಕಾಮಗಾರಿ ವೇಗ ನೀಡಿ, ಪೂರ್ಣಗೊಳಿಸಬೇಕು. ಮೆಟ್ರೊ ಪ್ರಯಾಣ ದರ ಹೆಚ್ಚಿಸಲಾಗಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಮೆಟ್ರೊ ನಿಲ್ದಾಣಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ ಮಾಡಬೇಕು. 

ಸಿ.ಎಸ್. ಮಂಜುಳಾ, ಸಹಾಯಕ ಪ್ರಾಧ್ಯಾಪಕಿ 

‘ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿ’

ಬೆಂಗಳೂರನ್ನು ‘ಬ್ರ್ಯಾಂಡ್ ಬೆಂಗಳೂರು’ ಆಗಿ ಪರಿವರ್ತಿಸಲು ಬಜೆಟ್‌ನಲ್ಲಿ ಸರ್ಕಾರ ಸುಸ್ಥಿರ ಯೋಜನೆಗಳತ್ತ ಗಮನಹರಿಸಬೇಕಿದೆ. ಅವುಗಳಲ್ಲಿ ಪ್ರಮುಖವಾಗಿ ಮೆಟ್ರೊ ಹಂತ-3 ಮತ್ತು ಉಪನಗರ ರೈಲು ಯೋಜನೆಗಳ ಕಾಮಗಾರಿಗೆ ವೇಗ ನೀಡಬೇಕು. ಇದರಿಂದ ನಗರದ ಸಂಚಾರ ದಟ್ಟಣೆ ಕಡಿಮೆ ಆಗುವ ಸಾಧ್ಯತೆ ಇದೆ. ರಸ್ತೆಗುಂಡಿಗಳಿಗೆ ಮುಕ್ತಿ, ವೈಟ್ ಟಾಪಿಂಗ್ ಮತ್ತು ಮಳೆನೀರು ಕಾಲುವೆಗಳ ಅಭಿವೃದ್ಧಿಪಡಿಸಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಕೆರೆಗಳ ಪುನಶ್ಚೇತನಗೊಳಿಸಬೇಕು. ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಳ ಮತ್ತು ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಸುಧಾರಣೆ ಮಾಡಿ ಸಾರ್ವಜನಿಕ ಸಾರಿಗೆಯಲ್ಲಿನ ಕೊರತೆಯನ್ನು ನೀಗಿಸಬೇಕಿದೆ.

ವಿಶಾಲ್ ಆರ್., ವಿದ್ಯಾರ್ಥಿ

ಆರ್. ವಿಶಾಲ್ 
ಬಜೆಟ್‌ ನಿರೀಕ್ಷೆ ನೀವೂ ಬರೆಯಿರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು ಬಜೆಟ್‌ ಮಂಡಿಸಲಿದ್ದಾರೆ. ಮೆಟ್ರೊ, ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ, ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅನುದಾನದ ಅಗತ್ಯವಿದೆ. ಜೀವನಮಟ್ಟವನ್ನು ಸುಗಮಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು. ತಮ್ಮ ನಿರೀಕ್ಷೆಗಳು ಏನು ಎಂಬುದನ್ನು ಜನರು ಹಂಚಿಕೊಳ್ಳಬಹುದು. 50 ಪದಗಳಿಗೆ ಮೀರದಂತೆ ಬರೆದು, ಭಾವಚಿತ್ರ ಸಮೇತ ಕಳುಹಿಸಬೇಕು. ವಾಟ್ಸ್‌ಆ್ಯಪ್‌ ಸಂಖ್ಯೆ: 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.