ADVERTISEMENT

ಪತ್ರಕರ್ತೆಯರ ಸಂಘದ ಪ್ರಶಸ್ತಿ ಪ್ರಕಟ: ‘ಪ್ರಜಾವಾಣಿ’ ಉಪ ಸಂಪಾದಕಿ ಅನಿತಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 15:16 IST
Last Updated 1 ಏಪ್ರಿಲ್ 2024, 15:16 IST
<div class="paragraphs"><p>ಗಾಯತ್ರಿ ಚಂದ್ರಶೇಖರ್ ಮತ್ತು ಎಚ್.ಅನಿತಾ</p></div>

ಗಾಯತ್ರಿ ಚಂದ್ರಶೇಖರ್ ಮತ್ತು ಎಚ್.ಅನಿತಾ

   

ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘವು ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಮಾಧ್ಯಮ ಕ್ಷೇತ್ರದ ಸಾಧನೆಗೆ ದೂರದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾಯತ್ರಿ ಚಂದ್ರಶೇಖರ್ ಹಾಗೂ ‘ಪ್ರಜಾವಾಣಿ’ಯ ಉಪ ಸಂಪಾದಕಿ ಎಚ್.ಅನಿತಾ ಆಯ್ಕೆಯಾಗಿದ್ದಾರೆ.

ಈ ವರ್ಷದ ಮಹಿಳಾ ಸಾಧಕರು ವಾರ್ಷಿಕ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಚಂದ್ರಯಾನ-3’ ಯೋಜನೆಯ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ಎಂ.ವಿ.ರೂಪಾ ಆಯ್ಕೆಯಾಗಿದ್ದಾರೆ. 

ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಸಂಘವು ಇದೇ 3ರಂದು ಹಮ್ಮಿಕೊಂಡಿರುವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಇದೇ ಸಮಾರಂಭದಲ್ಲಿ ಬೆಂಗಳೂರು ನಗರ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ತಿಳಿಸಿದ್ದಾರೆ.

ಎಂ.ವಿ.ರೂಪಾ ಮತ್ತು ಕಾತ್ಯಾಯಿನಿ ಚಾಮರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.