ADVERTISEMENT

ಪಟ್ಟಣಗೆರೆ: ವೈಭವದ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:59 IST
Last Updated 2 ನವೆಂಬರ್ 2023, 15:59 IST
ಪಟ್ಟಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ನುಡಿಹಬ್ಬ-5ರ ಕಾರ್ಯಕ್ರಮದಲ್ಲಿ ಸಾಗಿದ ಸ್ತಬ್ದ ಚಿತ್ರಗಳ ಮೆರವಣಿಗೆ.
ಪಟ್ಟಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ನುಡಿಹಬ್ಬ-5ರ ಕಾರ್ಯಕ್ರಮದಲ್ಲಿ ಸಾಗಿದ ಸ್ತಬ್ದ ಚಿತ್ರಗಳ ಮೆರವಣಿಗೆ.   

ರಾಜರಾಜೇಶ್ವರಿನಗರ: ಪಟ್ಟಣಗೆರೆಯಲ್ಲಿರುವ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ವತಿಯಿಂದ ನಡೆದ ‘ಕರ್ನಾಟಕ ರಾಜ್ಯೋತ್ಸವ ನುಡಿಹಬ್ಬ-5‘ ಅನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಭುವನೇಶ್ವರಿ ಅಲಂಕಾರದಲ್ಲಿ ನಗರ ದೇವತೆ ಅಣ್ಣಮ್ಮದೇವಿಯ ಮೆರವಣಿಗೆಯಲ್ಲಿ ಕವಿಗಳು, ದಾಸರು, ಶರಣರು, ಮಯೂರವರ್ಮರಿಂದ ಶ್ರೀಕಂಠದತ್ತ ಒಡೆಯರ್ ಅವರ ಭಿತ್ತಿ ಚಿತ್ರಗಳ ಕಣ್ಮನ ಸೆಳೆದವು.

ವೀರಗಾಸೆ, ವೀರಭದ್ರನಕುಣಿತ, ಪಟ್ಟದ, ಪೂಜಾ ಕುಣಿತ, ಗೊರವನ ಕುಣಿತ, ಕರಡಿ ಕುಣಿತ, ಕಂಸಾಳೆ, ನೃತ್ಯ ಮೆರವಣಿಗೆಗೆ ಮೆರುಗು ನೀಡಿದವು, ನೋಡುಗರ ಕಣ್ಮನ ಸೆಳೆದವು. ಕರುನಾಡ ಸೇನೆ ರಾಜ್ಯ ಘಟಕದ ಗೌರವ ಅಧ್ಯಕ್ಷ ಪಟ್ಟಣಗೆರೆ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವಜಾರೋಹಣ ನೇರವೆರಿಸಿದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಬಸವಾನಂದ ಪ್ರಕಾಶ್, ಬಿಬಿಎಂಪಿ ಮಾಜಿ ಸದಸ್ಯ ಜಿ. ಎಚ್. ರಾಮಚಂದ್ರ, ಸಮಾಜಸೇವಕ ಭೂಪಾಲ್, ಡಿ. ವಿ. ಸದಾನಂದಮೂರ್ತಿ ಶಾಸ್ತ್ರಿ, ಸಂಸ್ಥೆಯ ಪ್ರಾಂಶುಪಾಲ ಡಿ .ಬಿ .ವಿವೇಕಾನಂದ, ನಿರ್ದೇಶಕ ಡಿ. ಬಿ. ವಿಜಯಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.