ADVERTISEMENT

ಕೆಎಸ್‌ಪಿಸಿಬಿಯಿಂದ ಸಮ್ಮತಿ ಮೇಳ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 18:53 IST
Last Updated 6 ಆಗಸ್ಟ್ 2020, 18:53 IST
ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು (ಎಡದಿಂದ ಮೊದಲನೆಯವರು) ಅವರಿಗೆ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ(ಮಧ್ಯ) ಮನವಿ ಪತ್ರ ಸಲ್ಲಿಸಿದರು. ಕೆಎಸ್‌ಪಿಸಿಬಿ ಸದಸ್ಯ ಶ್ರೀಕಾಂತ ದತ್ತ ಇದ್ದರು –ಪ್ರಜಾವಾಣಿ ಚಿತ್ರ
ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು (ಎಡದಿಂದ ಮೊದಲನೆಯವರು) ಅವರಿಗೆ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ(ಮಧ್ಯ) ಮನವಿ ಪತ್ರ ಸಲ್ಲಿಸಿದರು. ಕೆಎಸ್‌ಪಿಸಿಬಿ ಸದಸ್ಯ ಶ್ರೀಕಾಂತ ದತ್ತ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಮೂಲಕವೇ ಸಮ್ಮತಿ ಮೇಳ ಆಯೋಜಿಸಲಾಗುವುದು’ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಹೇಳಿದರು.

ಮಾಲಿನ್ಯ ನಿಯಂತ್ರಣಾ ಮಂಡಳಿ ಕಾರ್ಯವಿಧಾನ ಸುಗಮಗೊಳಿಸುವ ನಿಟ್ಟಿನಲ್ಲಿರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಕೃಷಿಯಂತೆ ಕೈಗಾರಿಕೆಗಳು ಕೂಡ ಭಾರತದ ಆರ್ಥಿಕತೆಯ ಬೆನ್ನೆಲುಬು. ಕಾಸಿಯಾ ಸದಸ್ಯತ್ವ ಪಡೆದ 6.50 ಲಕ್ಷ ಕೈಗಾರಿಕೆಗಳಿದ್ದರೂ ಮಂಡಳಿಯಲ್ಲಿ ಒಂದು ಲಕ್ಷ ಮಾತ್ರ ನೊಂದಾಯಿಸಿಕೊಂಡಿದ್ದಾರೆ.ಸಮಸ್ಯೆ ಬಗೆಹರಿಸಿಕೊಳ್ಳಲು ಕೈಗಾರಿಕೆಗಳು ಮುಂದೆ ಬರಬೇಕು. ಸಹಕಾರ ನೀಡಲು ಮಂಡಳಿ ಸದಾ ಸಿದ್ಧವಿದೆ’ ಎಂದರು.

ADVERTISEMENT

ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ಸಂಸ್ಥೆಯ ಪರಿಸರ ಮತ್ತು ಪರಿಸರ ವಿಜ್ಞಾನ ಸಮಿತಿಯ ಅಧ್ಯಕ್ಷ ಎಚ್.ಕೆ.ಮಲ್ಲೇಶಗೌಡ ಅವರು ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.