ADVERTISEMENT

ಟರ್ಮಿನಲ್‌ 2: ಕಲಬುರಗಿಗೆ ಹಾರಿದ ‘ಸ್ಟಾರ್‌ ಏರ್’ ಏರ್‌ಲೈನ್ ವಿಮಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 23:38 IST
Last Updated 15 ಜನವರಿ 2023, 23:38 IST
ದೇವನಹಳ್ಳಿ ವಿಮಾನ ನಿಲ್ದಾಣ ಟರ್ಮಿನಲ್‌ 2 ಗೆ ಆಗಮಿಸಿದ ಪ್ರಯಾಣಿಕರನ್ನು ಸ್ವಾಗತಿಸಲಾಯಿತು
ದೇವನಹಳ್ಳಿ ವಿಮಾನ ನಿಲ್ದಾಣ ಟರ್ಮಿನಲ್‌ 2 ಗೆ ಆಗಮಿಸಿದ ಪ್ರಯಾಣಿಕರನ್ನು ಸ್ವಾಗತಿಸಲಾಯಿತು   

ದೇವನಹಳ್ಳಿ: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 (ಟಿ2) ಭಾನುವಾರ ಮಕರ ಸಂಕ್ರಾಂತಿ ಯಂದು ಮೊದಲ ದೇಶಿಯ ವಿಮಾನ ಹಾರಾಟದ ಕಾರ್ಯಾಚರಣೆ ಆರಂಭಿಸಿದೆ.

‘ಸ್ಟಾರ್‌ ಏರ್’ ಏರ್‌ಲೈನ್ ವಿಮಾನ ಹೊಸ ಟರ್ಮಿನಲ್‌ನಿಂದ ಮೊದಲ ಹಾರಾಟ ಆರಂಭಿಸಿದ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬೆಳಿಗ್ಗೆ 8:40ಕ್ಕೆ ಇಲ್ಲಿಂದ ಟೇಕ್ ಆಫ್‌ ಆದ ವಿಮಾನ ಕಲಬುರಗಿಗೆ ಹಾರಿತು. ಬೆಳಿಗ್ಗೆ 11.25ಕ್ಕೆ ಕಲಬುರಗಿಯಿಂದ ಹಿಂತಿರುಗಿದೆ. ಮುಂದಿನ ಕೆಲ ತಿಂಗಳಲ್ಲಿಯೇ ಇತರೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಹಂತ ಹಂತವಾಗಿ ಟಿ–2ನಿಂದ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆ ಇದೆ.

‘ಟಿ–2ನಿಂದ ಸ್ಟಾರ್‌ ಏರ್‌ ಹೊಸದಾಗಿ ಕಾರ್ಯಾಚರಣೆ ಆರಂಭಿಸಿದೆ. ಬಾಕಿ ಉಳಿದಿರುವ ಟರ್ಮಿನಲ್‌–2 ಕೆಲಸಗಳು ಶೀಘ್ರ ಪೂರ್ಣಗೊಳ್ಳಲಿದ್ದು ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳು ಹಂತಹಂತವಾಗಿ ಟಿ–2ರಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು ಬಿಐಎಎಲ್‌ನ ಎಂ.ಡಿ ಹರಿ ಮರಾರ್‌ ತಿಳಿಸಿದರು.

ADVERTISEMENT

ಟರ್ಮಿನಲ್ ಬುಲೆವಾರ್ಡ್ ರಸ್ತೆ
ಪ್ರಯಾಣಿಕರು ಟಿ–2 ಗೆ ಸುಲಭವಾಗಿ ಪ್ರವೇಶಿಸಲು, 4.4 ಕಿ.ಮೀ. ಉದ್ದದ ‘ಟರ್ಮಿನಲ್ ಬುಲೆವಾರ್ಡ್’ ಹೆಸರಿನ ರಸ್ತೆಯನ್ನು ಈ ವಾರದ ಆರಂಭದಲ್ಲಿ ಉದ್ಘಾಟಿಸಲಾಗಿದೆ.

ಈ ರಸ್ತೆಯು ಟಿ–2 ನಿರ್ಗಮನ ಮತ್ತು ಆಗಮನ ದ್ವಾರಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಯಾವುದೇ ಟ್ರಾಫಿಕ್‌ ಸಿಗ್ನಲ್‌ ಇಲ್ಲದೇ ಇರುವುದು ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಟಿ–2 ಪ್ರಯಾಣಿಕರನ್ನು ಪಾರ್ಕಿಂಗ್ ಪ್ರದೇಶದಲ್ಲಿ ಪುಟ್ಟ ಕಾರುಗಳ (ಬಗಿ) ಮೂಲಕ ಕರೆದೊಯ್ಯುವ ವ್ಯವಸ್ಥೆ ಇದೆ. ಟಿ1 ಮತ್ತು ಟಿ2 ನಡುವೆ ಶಟಲ್ ಸೇವೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.