ADVERTISEMENT

ಬೆಂಗಳೂರು | ಹಣ ವಸೂಲಿಗಾಗಿ ಅಪಹರಣ: ಇಬ್ಬರ ಬಂಧನ

ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:09 IST
Last Updated 24 ಜೂನ್ 2025, 16:09 IST
ಸೈಯದ್‌ ಜಾಕಿರ್  
ಸೈಯದ್‌ ಜಾಕಿರ್     

ಬೆಂಗಳೂರು: ಹಣಕಾಸು ವಿಚಾರಕ್ಕೆ ಉಂಟಾದ ವೈಷಮ್ಯದಿಂದ ಪರಿಚಿತ ವ್ಯಕ್ತಿಯನ್ನು ಅಪಹರಿಸಿದ್ದ ಇಬ್ಬರನ್ನು ಕೆ.ಪಿ.ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಶಿರಾದ ಸೈಯದ್‌ ಮುಜಾಹಿದ್ (39) ಹಾಗೂ ಸೈಯದ್‌ ಜಾಕಿರ್ (29) ಬಂಧಿತ ಆರೋಪಿಗಳು.

‘ಸೈಯದ್‌ ಮುಜಾಹಿದ್ ಹಾಗೂ ಇಮ್ರಾನ್‌ ಖಾನ್ ಇಬ್ಬರೂ ಹಳೆಯ ಕಾರುಗಳನ್ನು ವ್ಯಾಪಾರ ಮಾಡುತ್ತಿದ್ದರು. ಇಬ್ಬರ ಮಧ್ಯೆ ₹2.50 ಲಕ್ಷ ಹಣದ ವ್ಯವಹಾರ ನಡೆದಿತ್ತು. ಹಣ ವಾಪಸ್ ಕೇಳಿದಾಗ ಕಾರಣ ಹೇಳಿ ಇಮ್ರಾನ್ ಖಾನ್ ಸತಾಯಿಸುತ್ತಿದ್ದ. ಇಮ್ರಾನ್ ಖಾನ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಸೈಯದ್‌ ಮುಜಾಹಿದ್ ಸಂಚು ರೂಪಿಸಿದ್ದ. ಈ ವಿಚಾರವನ್ನು ತನ್ನ ಸ್ನೇಹಿತ ಸೈಯದ್‌ ಜಾಕಿರ್‌ಗೂ ತಿಳಿಸಿದ್ದ. ಆರೋಪಿಗಳಿಬ್ಬರೂ ಸೇರಿಕೊಂಡು ಭಾನುವಾರ ಮಧ್ಯಾಹ್ನ ಸ್ಕಾರ್ಪಿಯೊ ಕಾರಿನಲ್ಲಿ ಇಮ್ರಾನ್‌ ಖಾನ್‌ ಅಪಹರಣ ಮಾಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಇಮ್ರಾನ್‌ ಖಾನ್‌ನನ್ನು ಅಪಹರಿಸಿ ಆರೋಪಿಗಳು ತುಮಕೂರಿಗೆ ಕರೆದೊಯ್ದು ಕೊಠಡಿಯಲ್ಲಿ ಇರಿಸಿದ್ದರು. ಇಮ್ರಾನ್ ಖಾನ್‌ ಅವರ ಪತ್ನಿ ಕೆಪಿ ಅಗ್ರಹಾರ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಇಮ್ರಾನ್‌ನನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

ಸೈಯದ್ ಮುಜಾಹಿದ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.