ADVERTISEMENT

ಮೂತ್ರಪಿಂಡದಲ್ಲಿ ಕಲ್ಲು: ಏಳೂವರೆ ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 21:17 IST
Last Updated 30 ಡಿಸೆಂಬರ್ 2020, 21:17 IST

ಬೆಂಗಳೂರು: ಎರಡೂ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದ ಏಳೂವರೆ ತಿಂಗಳು ಹೆಣ್ಣು ಮಗುವಿಗೆ ರಾಜಾಜಿನಗರದ ಎನ್.ಯು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಮೂರು ವಾರಗಳ ಹಿಂದೆ ಮಗು ಜ್ವರದಿಂದ ಬಳಲುತ್ತಿದ್ದರಿಂದ ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಗುವಿನ ದೇಹದ ಎಡ ಭಾಗದಲ್ಲಿ ಮೂತ್ರಪಿಂಡದಿಂದ ಮೂತ್ರ ಕೋಶಕ್ಕೆ ಸಂಪರ್ಕ ಕಲ್ಪಿಸುವ ನಳಿಕೆಯಲ್ಲಿ 9 ಮಿಲಿ ಮೀಟರ್ ಹಾಗೂ ಒಂದು ಸೆಂ.ಮೀ ಗಾತ್ರದ ಕಲ್ಲು ಇರುವುದನ್ನು ಪತ್ತೆ ಮಾಡಿದರು. ಯುರೆಟೆರೋಸ್ಕೋಪಿ ತಂತ್ರಜ್ಞಾನದ ನೆರವಿನಿಂದ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಮಗು ಚೇತರಿಸಿಕೊಂಡಿದೆ.

‘ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದಲ್ಲಿನ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಕಲ್ಲು ಬೆಳೆದಿದ್ದ ಪರಿಣಾಮ ಅದನ್ನು ಹೊರತೆಗೆಯುವುದು ಸವಾಲಾಗಿತ್ತು’ ಎಂದು ಆಸ್ಪತ್ರೆಯ ಡಾ. ಪ್ರಸನ್ನ ವೆಂಕಟೇಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.