ADVERTISEMENT

ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 'ಟ್ರೋಪಿಕಲ್ ನ್ಯೂ ಇಯರ್ 2026'ಸಂಭ್ರಮ

ಹೊಸ ವರ್ಷ ಸಂಭ್ರಮಕ್ಕೆ ಕಿಂಗ್ಸ್ ಕ್ಲಬ್‌ ವೇದಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2025, 11:26 IST
Last Updated 30 ಡಿಸೆಂಬರ್ 2025, 11:26 IST
<div class="paragraphs"><p>ಟ್ರೋಪಿಕಲ್ ನ್ಯೂ ಇಯರ್ 2026</p></div>

ಟ್ರೋಪಿಕಲ್ ನ್ಯೂ ಇಯರ್ 2026

   
‘ಟ್ರೋಪಿಕಲ್ ಎನ್‌ವೈಇ 2026 ಬೆಂಗಳೂರು’ ಶೀರ್ಷಿಕೆಯಡಿ ಮನರಂಜನಾ ಕಾರ್ಯಕ್ರಮ

ಬೆಂಗಳೂರು: ಹೊಸ ವರ್ಷದ ಸಂಭ್ರಮ ಹೆಚ್ಚಿಸಲು ನಾಗರಬಾವಿಯಲ್ಲಿರುವ ಕಿಂಗ್ಸ್ ಕ್ಲಬ್ ಡಿ.31ರಂದು ಸಂಜೆ 7.30ರಿಂದ ‘ಟ್ರೋಪಿಕಲ್ ಎನ್‌ವೈಇ 2026 ಬೆಂಗಳೂರು’ ಶೀರ್ಷಿಕೆಯಡಿ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಅದ್ದೂರಿಯಾಗಿ ಹೊಸ ವರ್ಷ ಬರಮಾಡಿಕೊಳ್ಳುವ ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗವಿದೆ. ಮನರಂಜನೆಯ ಜತೆಗೆ ಉತ್ಸಾಹ ಹೆಚ್ಚಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. 

ADVERTISEMENT

ಈ ಕ್ಲಬ್‌ನ ವಿವಿಧ ಮಹಡಿಗಳಲ್ಲಿ ಏಕಕಾಲದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲೈವ್ ಡಿಜೆ ಪ್ರದರ್ಶನವು ರಾತ್ರಿಯಿಡೀ ವೈವಿಧ್ಯಮಯ ಸಂಗೀತದ ಅನುಭವ ನೀಡುತ್ತದೆ. ಬೆಲ್ಲಿ ಡಾನ್ಸ್ ಪ್ರದರ್ಶನಗಳು, ಫ್ಯಾಷನ್ ಶೋ, ಹಾಡು–ನೃತ್ಯ ಸೇರಿ ಹಲವು ವಿಶೇಷತೆಯನ್ನು ಹೊಸವರ್ಷ ಸಂಭ್ರಮದ ಈ ಕಾರ್ಯಕ್ರಮ ಒಳಗೊಂಡಿದೆ. ಅತಿಥಿ ಕಲಾವಿದರು ಸಹ ಪಾಲ್ಗೊಂಡು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮಕ್ಕಳೊಂದಿಗೆ ಕುಟುಂಬಸ್ಥರು ಸಂಭ್ರಮಿಸಲೂ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿದೆ. ಅಲ್ಲಿ ಆಟ ಮತ್ತು ಮನರಂಜನಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವೇದಿಕೆಯು ರೋಮಾಂಚನಕಾರಿ ಅನುಭವವನ್ನು ನೀಡಲಿದೆ. 

ಪ್ರೀಮಿಯಂ ಟೇಬಲ್ ಕಾಯ್ದಿರಿಸುವಿಕೆಯ ಆಯ್ಕೆಯನ್ನೂ ನೀಡಲಾಗಿದ್ದು, ತೆರೆದ ಪ್ರದೇಶದಲ್ಲಿ ಹೊಸವರ್ಷಾಚರಣೆಯನ್ನು ಆನಂದಿಸಬಹುದಾಗಿದೆ. ಆಹಾರ ಮತ್ತು ಪಾನೀಯವು ಈ ಸಂಭ್ರಮದ ಭಾಗವಾಗಿದ್ದು, 40ಕ್ಕೂ ಅಧಿಕ ಬಗೆಯ ತಿನಿಸುಗಳು ಲಭ್ಯವಾಗಲಿವೆ. ಅನಿಯಮಿತ ಬಫೆಯನ್ನು ಈ ಕಾರ್ಯಕ್ರಮ ಒಳಗೊಂಡಿದೆ.

ಹೊಸವರ್ಷ ಸಂಭ್ರಮದ ಈ ಕಾರ್ಯಕ್ರಮವು ಟಿಕೆಟ್‌ಗಳನ್ನು ಒಳಗೊಂಡಿದ್ದು, ಟಿಕೆಟ್‌ ಹೊಂದಿದವರಿಗೆ ಮದ್ಯಪಾನ ಹಾಗೂ ತಂಪು ಪಾನೀಯಗಳ ಕೂಪನ್‌ ಒದಗಿಸಲಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಕಿಂಗ್ಸ್ ಕ್ಲಬ್ ವೆಬ್‌ಸೈಟ್‌ಗೆ ಭೇಟಿ ನೀಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.