ಕೆ.ಆರ್.ಪುರ: ಬಿದರಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಬೀದಿ ಬದಿಗಳಲ್ಲಿ ಮಂಗಳವಾರ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು.
‘ಪ್ರಜಾವಾಣಿ’ಯು ‘ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ’ ಎಂಬ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಬದಿ ತ್ಯಾಜ್ಯವನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದರು.
‘ಬಿದರಹಳ್ಳಿಯಿಂದ ಕಿತ್ತಗನೂರು ಸಂಪರ್ಕ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿರುವ ಜಮೀನುಗಳ ಮಾಲೀಕರು ವ್ಯಾಜ್ಯ ಹೂಡಿದ್ದಾರೆ. ವ್ಯಾಜ್ಯದಿಂದಾಗಿ ಜಮೀನುಗಳು ಖಾಲಿಯಾಗಿ ಬಿದ್ದಿವೆ. ಇಲ್ಲಿ ಜನವಸತಿ ಇಲ್ಲ. ಕೆಲ ಬಡಾವಣೆಗಳ ನಿವಾಸಿಗಳು ಯಾರು ಇಲ್ಲದ ವೇಳೆಯಲ್ಲಿ ಖಾಲಿ ಜಾಗದ ರಸ್ತೆ ಪಕ್ಕದಲ್ಲಿ ಕಸ ಸುರಿದು ಹೋಗುತ್ತಾರೆ’ ಎಂದು ಬಿದರಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಎನ್.ಮುನಿರಾಜು ಹೇಳಿದರು.
‘ಪ್ರತಿದಿನವೂ ಕಸ ತೆರವು ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಸುರಿಯದಂತೆ ಜನರನ್ನು ಜಾಗೃತಿ ಮೂಡಿಸುವ ಕೆಲಸವೂ ನಿರಂತರವಾಗಿ ಮಾಡಲಾಗುತ್ತದೆ. ಕಣ್ತಪ್ಪಿಸಿ ರಾತ್ರಿ ವೇಳೆ ರಸ್ತೆ ಬದಿ ಕಸ ಸುರಿಯಲಾಗುತ್ತದೆ. ಮಳೆಗಾಲ ಆಗಿರುವುದರಿಂದ ಕೆಲವೊಮ್ಮೆ ಕಸ ವಿಲೇವಾರಿ ಘಟಕದಲ್ಲಿ ಸಮಸ್ಯೆಯಾದಾಗ ವಾಹನಗಳು ಸರಿಯಾದ ವೇಳೆಗೆ ಬರದೆ, ಕಸ ಹೆಚ್ಚು ಸಂಗ್ರಹಗೊಂಡು ಸಮಸ್ಯೆ ಉಂಟಾಗುತ್ತದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎನ್.ಲೋಹಿತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.