ADVERTISEMENT

ಕ್ರಿಸ್ತು ಜಯಂತಿ ವಿ.ವಿಗೆ ಸಮಗ್ರ ಪ್ರಶಸ್ತಿ

'ಕ್ರೆಸಿಂಡೊ-2025' ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 18:41 IST
Last Updated 6 ನವೆಂಬರ್ 2025, 18:41 IST
‘ಕ್ರೆಸಿಂಡೊ-2025’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಉತ್ಸವದಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯಕ್ಕೆ ಪಾರಿತೋಷಕ ನೀಡಲಾಯಿತು. ಸಿಂಧಿ ಕಾಲೇಜಿನ ಅಧ್ಯಕ್ಷ ಅವಿನಾಶ್‌ ಕುಕ್ರೇಜ, ಆಡಳಿತ ಮಂಡಳಿ ಸದಸ್ಯ ಕಿರಣ್‌.ಎಸ್‌ ಚಾವ್ಲಾ, ಪ್ರಾಂಶುಪಾಲರಾದ ಡಾ.ಎನ್.ಆಶಾ ಇದ್ದರು.
‘ಕ್ರೆಸಿಂಡೊ-2025’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಉತ್ಸವದಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯಕ್ಕೆ ಪಾರಿತೋಷಕ ನೀಡಲಾಯಿತು. ಸಿಂಧಿ ಕಾಲೇಜಿನ ಅಧ್ಯಕ್ಷ ಅವಿನಾಶ್‌ ಕುಕ್ರೇಜ, ಆಡಳಿತ ಮಂಡಳಿ ಸದಸ್ಯ ಕಿರಣ್‌.ಎಸ್‌ ಚಾವ್ಲಾ, ಪ್ರಾಂಶುಪಾಲರಾದ ಡಾ.ಎನ್.ಆಶಾ ಇದ್ದರು.   

ಯಲಹಂಕ: ಕೆಂಪಾಪುರದಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಕ್ರೆಸಿಂಡೊ-2025’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಉತ್ಸವದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡರು. 

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಂಧೀ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್‌.ಎಫ್‌ ಮಾದ್ವಾನಿ, ‘ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ತಂದು, ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ವೇದಿಕೆ ಕಲ್ಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಒಳ್ಳೆಯ ಕಲಾವಿದರಾಗಿ ಹೊರಹೊಮ್ಮುವುದರ ಜೊತೆಗೆ ಉತ್ತಮ ಅವಕಾಶಗಳು ದೊರೆಯಬೇಕೆಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದರು.

ಪ್ರಾಂಶುಪಾಲರಾದ ಡಾ.ಎನ್.ಆಶಾ ಮಾತನಾಡಿ, ‘ಬ್ರಹ್ಮಾಸ್ತ್ರ’ ಥೀಮ್‌ನಡಿ ಈ ವರ್ಷದ ಕ್ರೆಸಿಂಡೊ ಸಾಂಸ್ಕೃತಿಕ ಸ್ಪರ್ಧೆಗಳ ಉತ್ಸವ ಆಯೋಜಿಸಲಾಗಿತ್ತು. ನಗರದ 100ಕ್ಕೂ ಹೆಚ್ಚು ಕಾಲೇಜುಗಳ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

ಸಮೂಹ ನೃತ್ಯ, ಗಾಯನ, ರಂಗೋಲಿ, ಆಶುಭಾಷಣ ಸ್ಪರ್ಧೆಹಗ್ಗ-ಜಗ್ಗಾಟ, ಫೇಸ್‌ ಪೇಂಟಿಂಗ್, ಯುಗಳ ನೃತ್ಯ, ಮೆಹಂದಿ, ಚಿತ್ರಕಲೆ, ಫ್ಯಾಷನ್ ಶೋ ಸೇರಿ ಒಟ್ಟು 29 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ₹ 2.20 ಲಕ್ಷ ಬಹುಮಾನ ವಿತರಿಸಲಾಯಿತು.  

ಸಿಂಧಿ ಕಾಲೇಜಿನ ಅಧ್ಯಕ್ಷ ಅವಿನಾಶ್‌ ಕುಕ್ರೇಜ, ಆಡಳಿತ ಮಂಡಳಿ ಸದಸ್ಯ ಕಿರಣ್‌.ಎಸ್‌ ಚಾವ್ಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.