ADVERTISEMENT

ಕೆ.ಆರ್.ಪುರ: ಅಂಬೇಡ್ಕರ್, ಜಗಜೀವನ್ ರಾಮ್‌ ಜಯಂತಿ

​ಪ್ರಜಾವಾಣಿ ವಾರ್ತೆ
Published 28 ಮೇ 2025, 19:44 IST
Last Updated 28 ಮೇ 2025, 19:44 IST
<div class="paragraphs"><p>ಸಂತೋಷ್ ಹೆಗ್ಡೆ ಅವರು ಬೈಕ್, ಆಟೊ ರ‍್ಯಾಲಿಗೆ ಚಾಲನೆ ನೀಡಿದರು</p></div>

ಸಂತೋಷ್ ಹೆಗ್ಡೆ ಅವರು ಬೈಕ್, ಆಟೊ ರ‍್ಯಾಲಿಗೆ ಚಾಲನೆ ನೀಡಿದರು

   

ಕೆ.ಆರ್.ಪುರ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂದೇಶಗಳು, ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಪಾಲಿಸುವವರು ಜೀವನದಲ್ಲಿ ಎಂದಿಗೂ ಕುಗ್ಗಲಾರರು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.

ಕೆ.ಆರ್.ಪುರ ಸಮೀಪದ ಹೂಡಿಯಲ್ಲಿ ಭಾರತೀಯರ ಸೇವಾ ಸಮಿತಿ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬೂ ಜಗಜೀವನ್ ರಾಮ್‌ ಅವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ಆಟೊ ಮತ್ತು ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಇಂದಿನ ಪ್ರಜೆಗಳು ಅಕ್ಷರಸ್ಥರೇ ಆಗಿರಲಿ, ಅನಕ್ಷರಸ್ಥರೇ ಆಗಿರಲಿ ಎಲ್ಲರೂ ತಿಳಿದು, ಆಲೋಚಿಸಬೇಕಾದ ಅಂಬೇಡ್ಕರ್‌ ಅವರ ಒಂದು ಸೂಕ್ಷ್ಮ ಸಂದೇಶವೆಂದರೆ ‘ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ’ ದೇಹಕ್ಕೆ ಔಷಧಿ ಎಂಬುದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹೂಡಿ ರಾಮಚಂದ್ರ (ಚಿನ್ನಿ), ಸಮಾಜ ಸೇವಕ ತಿಪ್ಪಸಂದ್ರ ಗಜೇಂದ್ರ, ಮುಖಂಡರಾದ ಮುನಿಮಾರಪ್ಪ, ಆಂಜಿನಪ್ಪ ಯಾದವ್, ಮುನಿರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.