ADVERTISEMENT

ತುರ್ತು ಸ್ಪಂದನ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 16:05 IST
Last Updated 14 ಡಿಸೆಂಬರ್ 2025, 16:05 IST
ತುರ್ತು ಸ್ಪಂದನ ವಾಹನ
ತುರ್ತು ಸ್ಪಂದನ ವಾಹನ   

ಬೆಂಗಳೂರು: ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು 'ಅಪಘಾತ ತುರ್ತು ಸ್ಪಂದನ ವಾಹನ'ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ನಿಗಮದ ಬಸ್‌ಗಳು ಮಾರ್ಗ ಮಧ್ಯೆ ಅಪಘಾತಕ್ಕೀಡಾದರೆ, ಬ್ರೇಕ್‌ ಡೌನ್ ಇನ್ನಿತರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ತುರ್ತು ವಾಹನಗಳು ತಕ್ಷಣ ಸ್ಥಳಕ್ಕೆ ತೆರಳಿ ದುರಸ್ತಿ ಮಾಡಲಿವೆ. ಸಂಚಾರಿ ಕಾರ್ಯಾಗಾರ ಮಾದರಿಯಲ್ಲಿ ಇದನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ ಒಂದು ವಾಹನಗಳನ್ನು ನಿಯೋಜಿಸಲಾಗುವುದು. ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ ಪ್ರದೇಶಗಳಲ್ಲಿ ಈ ವಾಹನದ ಸೌಲಭ್ಯ ಇರಲಿದೆ ಎಂದು ಹೇಳಿದರು.

ADVERTISEMENT

ವಿವಿಧ ನಿಗಮಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.