ADVERTISEMENT

ಸಂಕ್ಷಿಪ್ತ ಸುದ್ದಿಗಳು: ಪುಸ್ತಕ ಬಹುಮಾನಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 23:30 IST
Last Updated 9 ಫೆಬ್ರುವರಿ 2026, 23:30 IST
<div class="paragraphs"><p>ಛಂದ ಪುಸ್ತಕ</p></div>

ಛಂದ ಪುಸ್ತಕ

   

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅನುವಾದಕರು ಹಾಗೂ ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.

2025ರ ಜ.1ರಿಂದ ಡಿ.31ರ ಅವಧಿಯಲ್ಲಿ ಪ್ರಥಮಾವೃತ್ತಿಯಲ್ಲಿ ಪ್ರಕಟಗೊಂಡ ಅನುವಾದಿತ ಕೃತಿಗಳು ಹಾಗೂ ಅನುವಾದ ಅಧ್ಯಯನ ಕುರಿತ ಪುಸ್ತಕಗಳನ್ನು ಪರಿಗಣಿಸಲಾಗುತ್ತದೆ. ಕನ್ನಡದಿಂದ ಇತರ ಭಾಷೆಗೆ ಅಥವಾ ಇತರ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳನ್ನು ಕಳುಹಿಸಬಹುದಾಗಿದೆ.

ADVERTISEMENT

ಪ್ರತಿ ಪುಸ್ತಕದ ನಾಲ್ಕು ಪ್ರತಿಗಳನ್ನು ಮಾರ್ಚ್ 31ರೊಳಗೆ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು–560056 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಅಕಾಡೆಮಿ ರಿಜಿಸ್ಟ್ರಾರ್ ದತ್ತಪ್ಪ ಸಾಗನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಕ್ಕೆ 080 23183311

****

ಕವಿ-ಕವಯಿತ್ರಿಯರಿಗೆ ಕವನ ಸ್ಪರ್ಧೆ

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ರಾಷ್ಟ್ರಕವಿ ಗೋವಿಂದ ಪೈ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್‌ 23ರಂದು ಉದಯೋನ್ಮುಖ ಕವಿ-ಕವಯಿತ್ರಿಯರಿಗೆ ಕವನ ಸ್ಪರ್ಧೆ ಆಯೋಜಿಸಿದೆ.

ಇದುವರೆಗೆ ಒಂದೂ ಕವನ ಸಂಕಲನ ಹೊರತರದ ಕವಿ-ಕವಯಿತ್ರಿಯರು, ‘ಕನ್ನಡ ನಾಡು–ನುಡಿ, ಸಾಹಿತ್ಯ, ಕನ್ನಡ ನಾಡಿನ ಪರಂಪರೆ’ ಕುರಿತು ರಚಿಸಿದ ಒಂದು ಕವನವನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದಾಗಿದೆ. ಪ್ರಥಮ ಬಹುಮಾನ ₹2,500, ದ್ವಿತೀಯ ಬಹುಮಾನ ₹2,000 ಹಾಗೂ ತೃತೀಯ ಬಹುಮಾನ ₹ 1,500 ಒಳಗೊಂಡಿದೆ.‌‌

ಆಸಕ್ತರು ಕವನವನ್ನು ಎ.ಎಸ್.‌ ನಾಗರಾಜಸ್ವಾಮಿ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಬೆಂಗಳೂರು-560056 ಈ ವಿಳಾಸಕ್ಕೆ ಮಾರ್ಚ್‌ 5ರೊಳಗೆ ಕಳುಹಿಸಬೇಕು. ₹ 50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: 9739001410 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.